ಡೆಹ್ರಾಡೂನ್: ಬಸ್ಸೊಂದು ಸೇತುವೆಯಿಂದ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಉತ್ತರಾಖಂಡದ(Uttarakhand) ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ.
ಗುಲರ್ ಬಜಾರ್ (Gular Bazar) ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಂದಕದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಆರಂಭಿಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಬಸ್ಸಿನಲ್ಲಿ (Bus) ಸುಮಾರು 30 ರಿಂದ 35 ಪ್ರಯಾಣಿಕರು ಸಂಚರಿಸುತ್ತಿದರು.
ಸ್ಥಳಕ್ಕೆ ಬ್ಯಾಸಿ ಮತ್ತು ಧಲ್ವಾಲಾ ಕೇಂದ್ರಗಳ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ನಿಯೋಜಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯ ಚುರುಕುಗೊಂಡಿದೆ.
🚨 गूलर के पास बस खाई में गिर गई थी, टिहरी पुलिस का युद्धस्तर पर रेस्क्यू अभियान जारी है।
🔹 अब तक 20 घायलों को रेस्क्यू कर अस्पताल भेजा जा चुका है।
🔹 हादसे में अब तक 04 शव बरामद किए जा
चुके हैं।#TehriPolice #RescueOperation #UttarakhandPolice #EmergencyResponse https://t.co/YgCt3HfKtp
— Tehri Garhwal Police Uttarakhand (@TehriGarhwalPol) November 17, 2026
ಕಂದಕದಿಂದ ಇದುವರೆಗೆ ಸುಮಾರು 20 ಗಾಯಾಳುಗಳನ್ನು ರಕ್ಷಿಸಿ ಹೊರತೆಗೆಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ಗಳ ಮೂಲಕ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಹ್ರಿ ಜಿಲ್ಲಾಧಿಕಾರಿ ನಿತಿಕಾ ಖಂಡೇಲ್ವಾಲ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಶ್ವೇತಾ ಚೌಬೆ ಸೇರಿದಂತೆ ಜಿಲ್ಲೆಯ ಉನ್ನತ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
