– ಭಾರತದಲ್ಲಿ ಜೋರಾಯ್ತು ಇಟಲಿ ಪಾಲಿಟಿಕ್ಸ್
ನವದೆಹಲಿ: ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ್ ಶೃಂಗಸಭೆ-2026’ರಲ್ಲಿ ಯುರೋಪಿಯನ್ ಸಮಾಜವಾದಿ ಪಕ್ಷದ (PES) ಪ್ರಧಾನ ಕಾರ್ಯದರ್ಶಿ ಹಾಗೂ ಇಟಲಿ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್(Giacomo Filibeck) ಅವರು ನೀಡಿದ ಹೇಳಿಕೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಶೃಂಗಸಭೆಯಲ್ಲಿ ಮಾತನಾಡಿದ್ದ ಫಿಲಿಬೆಕ್, ಮತ ಕಳ್ಳ, ಅಧಿಕಾರ ಬಿಟ್ಟು ತೊಲಗು (Vote Chor, Gaddi Chhod ) ಎಂಬ ಘೋಷವಾಕ್ಯವನ್ನು ಪ್ರಸ್ತಾಪಿಸಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ (Rahul Gandhi) ಹಾಗೂ ಸಭೆಯಲ್ಲಿದ್ದ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ್ದರು.
Giacomo Filibeck, Secretary General of the Party of European Socialists, echoed the Congress’s slogan “Vote chor, gaddi chhod” at the Bharat Summit in Hyderabad, with Rahul Gandhi on stage. Filibeck also repeated the slogan in English, saying, “Vote thief, leave your seat.” The remarks came amid the Congress’s political campaign targeting Prime Minister Narendra Modi over its allegations concerning electoral irregularities.
#GiacomoFilibeck #RahulGandhi #BharatSummit #Congress #VoteChorGaddiChhod #IndiaTodaySocial
— IndiaToday (@IndiaToday) November 15, 2026
ಫಿಲಿಬೆಕ್ ಅವರ ಹೇಳಿಕೆ ಹಾಗೂ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, “ಹೈದರಾಬಾದ್ನಲ್ಲಿ ನಡೆದಿರುವುದು ‘ಭಾರತ್ ಸಮ್ಮಿಟ್’ ಅಲ್ಲ, ಬದಲಾಗಿ ಅದು ‘ಭಾರತ್ ವಿರೋಧಿ ಸಮ್ಮಿಟ್’. ಭಾರತ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ನೀರೆರೆಯುತ್ತಿದ್ದು, ದೇಶದ ಹಿತಾಸಕ್ತಿ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಅವಮಾನ ಮಾಡುತ್ತಿದೆ,” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಮತ್ತು ಅಸ್ಥಿರತೆ ಸೃಷ್ಟಿಸಲು ವಿದೇಶಿ ಹಾಗೂ ಭಾರತ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸುವ ಪಿತೂರಿಯಲ್ಲಿ ನಿರತರಾಗಿದ್ದಾರೆ ಎಂದು ಭಾಟಿಯಾ ಆರೋಪಿಸಿದ್ದಾರೆ.
नेता प्रतिपक्ष राहुल गांधी भारत विरोधी शक्तियों को एकजुट करने में लगे हैं। कोई ऐसा मंच नहीं है, जहां वो भारत को बदनाम करने और अराजकता फैलाकर भारत में अस्थिरता लाने की साजिश न करें।
14 नवंबर, 2026 को हैदराबाद में ‘भारत समिट’ आयोजित की गई थी।
इस समिट को नेता प्रतिपक्ष द्वारा आयोजित एंटी-भारत समिट कहा जाए तो उपयुक्त होगा।
हमने देखा कि देश के आदरणीय प्रधानमंत्री श्री @narendramodi जी जब गुजरात के मुख्यमंत्री थे, तब गुजरात इन्वेस्टमेंट समिट होती थी।
भाजपा शासित प्रदेशों में इन्वेस्टमेंट समिट होती है। यह एक विशेष मंच होता है, जहां फॉरेन इन्वेस्टर आकर इन्वेस्टमेंट की बात करते हैं।
लेकिन दुर्भाग्यपूर्ण यह है कि कांग्रेस शासित राज्यों में भारत का हित पीछे छूट जाता है। जो मंच भारत और तेलंगाना को मजबूती प्रदान कर सकता था, उस मंच का उपयोग अराजकता फैलाने और भारत को अस्थिर करने के बीज बोने के लिए किया जाता है।
— Gaurav Bhatia गौरव भाटिया 🇮🇳 (@gauravbhatiabjp) November 16, 2026
ಜಿಯಾಕೊಮೊ ಫಿಲಿಬೆಕ್ ಅವರ ಹೇಳಿಕೆಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಪ್ತ ವಲಯದ ಸಂಸದೆ ಹಾಗೂ ‘ಫೋರ್ಜಾ ಇಟಾಲಿಯಾ’ ಪಕ್ಷದ ರಾಷ್ಟ್ರೀಯ ಉಪ ಕಾರ್ಯದರ್ಶಿ ಡೆಬೊರಾ ಬರ್ಗಾಮಿನಿ(Deborah Bergamini) ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಬರ್ಗಾಮಿನಿ, “ಭಾರತ ಮತ್ತು ಇಟಲಿ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಿದೆ. ಸ್ನೇಹಪರ ರಾಷ್ಟ್ರವಾದ ಭಾರತದ ಆಂತರಿಕ ರಾಜಕೀಯ ಚರ್ಚೆಗಳಲ್ಲಿ ವಿದೇಶಿ ರಾಜಕೀಯ ಪ್ರತಿನಿಧಿಗಳು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. 97 ಕೋಟಿ ಮತದಾರರನ್ನು ಹೊಂದಿರುವ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಯುರೋಪಿಯನ್ನರು ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ. ಭಾರತಕ್ಕೆ ತನ್ನದೇ ಆದ ರಾಜಕೀಯ ಸಂಸ್ಥೆಗಳು ಮತ್ತು ನ್ಯಾಯಾಂಗ ವ್ಯವಸ್ಥೆಯಿದ್ದು, ಆಂತರಿಕ ವಿವಾದಗಳನ್ನು ಅಲ್ಲಿನ ಪ್ರಜಾಪ್ರಭುತ್ವದ ನಿಯಮಗಳ ಅಡಿಯಲ್ಲೇ ಬಗೆಹರಿಸಿಕೊಳ್ಳಲಾಗುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.
