– ವಿಶ್ವದಾದ್ಯಂತ 1,384.50 ಕೋಟಿ ರೂ ಗಳಿಕೆ
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ( Ramayana) ನಾಗಾಲೋಟ ಮುಂದುವರಿದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ (Yash) ಅಭಿನಯದ ಈ ಪೌರಾಣಿಕ ಸಿನಿಮಾ ಎರಡನೇ ವಾರದಲ್ಲೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ನವೆಂಬರ್ 15ರ ಭಾನುವಾರ 11ನೇ ದಿನಕ್ಕೆ ಭಾರತದಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಬಾಲಿವುಡ್ ಸಿನಿಮಾಗಳ ಪೈಕಿ ಅತಿ ಹೆಚ್ಚು ಎರಡನೇ ಭಾನುವಾರದ ಕಲೆಕ್ಷನ್ ಮಾಡಿದ ದಾಖಲೆ ನಿರ್ಮಿಸಿದೆ. ಈ ಹಿಂದೆ ‘ಧುರಂಧರ್ 2’ ಗಳಿಸಿದ್ದ 68 ಕೋಟಿ ರೂ. ದಾಖಲೆಯನ್ನು ಹಿಂದಿಕ್ಕಿದೆ.
11ನೇ ದಿನ 75 ಕೋಟಿ ರೂ. ಕಲೆಕ್ಷನ್
‘ರಾಮಾಯಣ’ದ ಭಾರತದಲ್ಲಿನ ನೆಟ್ ಕಲೆಕ್ಷನ್ ಈಗ 760.60 ರೂ. ಕೋಟಿ ತಲುಪಿದೆ. ವಿಶ್ವದಾದ್ಯಂತ ಚಿತ್ರದ ಒಟ್ಟು ಗಳಿಕೆ 1,384.50 ಕೋಟಿ ರೂ. ಆಗಿದೆ.
ಎರಡನೇ ಭಾನುವಾರ 75 ಕೋಟಿ ರೂ. ಗಳಿಸಿರುವ ಸಿನಿಮಾ, ಹಿಂದಿನ ದಿನವಾದ ಶನಿವಾರದ 72.90 ಕೋಟಿ ರೂ. ಕಲೆಕ್ಷನ್ಗಿಂತ ಹೆಚ್ಚಿನ ಆದಾಯ ದಾಖಲಿಸಿದೆ. ಶುಕ್ರವಾರ 48.10 ರೂ. ಕೋಟಿ ಗಳಿಸಿತ್ತು. ಈ ಮೂಲಕ ಎರಡನೇ ವಾರಾಂತ್ಯದ ಮೂರು ದಿನಗಳಲ್ಲಿ ಭಾರತದಲ್ಲಿ ಸುಮಾರು 196 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.
‘ಧುರಂಧರ್ 2’ ದಾಖಲೆ ಹಿಂದಿಕ್ಕಿದ ‘ರಾಮಾಯಣ’
ಭಾನುವಾರದ ಗಳಿಕೆಯೊಂದಿಗೆ ‘ರಾಮಾಯಣ’ ಮತ್ತೊಂದು ಬಾಕ್ಸ್ ಆಫೀಸ್ ದಾಖಲೆ ತನ್ನದಾಗಿಸಿಕೊಂಡಿದೆ. ‘ಧುರಂಧರ್ 2’ ಸಿನಿಮಾ ಎರಡನೇ ಭಾನುವಾರ 68 ಕೋಟಿ ರೂ. ಗಳಿಸಿತ್ತು. ಇದೀಗ ‘ರಾಮಾಯಣ’ 75 ಕೋಟಿ ರೂ. ಗಳಿಸುವ ಮೂಲಕ ಆ ದಾಖಲೆಯನ್ನು ಮೀರಿಸಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. 11 ದಿನಗಳ ಅಂತ್ಯಕ್ಕೆ ವಿಶ್ವದಾದ್ಯಂತ 1,384.50 ಕೋಟಿ ರೂ. ಗಳಿಸಿದೆ. ಇದರಲ್ಲಿ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 909 ಕೋಟಿ ರೂ. ಆಗಿದ್ದರೆ, ವಿದೇಶಿ ಮಾರುಕಟ್ಟೆಯಿಂದ 475.50 ಕೋಟಿ ರೂ. ಬಂದಿದೆ.
ಭಾರತದ ನೆಟ್ ಕಲೆಕ್ಷನ್ 760.60 ಕೋಟಿ ರೂ. ತಲುಪಿದ್ದು, 800 ಕೋಟಿ ರೂ. ಗಡಿಯತ್ತ ಸಾಗುತ್ತಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವುದೂ ಚಿತ್ರದ ಗಳಿಕೆಗೆ ನೆರವಾಗಿದೆ.
