– ಶಾಲೆಯಲ್ಲಿ ಬಿಜೆಪಿ ಶಾಸಕನಿಂದ ರಾಜಕೀಯ ಮಾತು
ಮಂಗಳೂರು: ಕಾಂಗ್ರೆಸ್ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಶಾಲೆಯಲ್ಲಿ ರಾಜಕೀಯ ವಿಚಾರ ಮಾತನಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಪೂಂಜಾ ಮಾತನಾಡಿದ್ದಾರೆ. ಶಾಲೆಯ ನೂತನ ಸಭಾಭವನಕ್ಕೆ ನರೇಂದ್ರ ಮೋದಿಯ ಹೆಸರು ನಾಮಕರಣ ಮಾಡಲಾಗಿದೆ. ಸರ್ಕಾರದ ಅನುಮತಿ ಪಡೆಯದೇ ನರೇಂದ್ರ ಮೋದಿ ಹೆಸರಿಟ್ಟ ಹಿನ್ನೆಲೆ ಶಿಕ್ಷಣ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಶಿಕ್ಷಣ ಇಲಾಖೆ ಸೂಚನೆ ಬೆನ್ನಲ್ಲೇ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆ ಅಭಿನಂದನಾ ಸಮಾರಂಭದಲ್ಲಿ ಬೆಳ್ತಂಗಡಿ ಶಾಸಕ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ನಂತಹ ದರಿದ್ರ ಕೆಟ್ಟ ಪಕ್ಷವನ್ನು ನೀವು ಯಾವತ್ತೂ ನೆಚ್ಚಿಕೊಂಡು ಹೋಗಬೇಡಿ. ಈ ದೇಶ ಇರೋದು ನರೇಂದ್ರ ಮೋದಿ ನಾಯಕತ್ವದಲ್ಲಿ. ನಿಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ಯಾರು ತೊಂದರೆ ಕೊಡುತ್ತಿದ್ದಾರೆ ಅವರ ಹಿಂದೆ ಹೋಗಬೇಡಿ. ಎಲ್ಲಿಂದಾದರೂ ಕಾಡಿ ಬೇಡಿ ಅನುದಾನ ತಂದು ಶಾಲೆಯನ್ನ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ ಆಗಬೇಕು ಅಂದ್ರೆ ಬಿಜೆಪಿ ಸರ್ಕಾರವೇ ಬರಬೇಕು: ಆರ್. ಅಶೋಕ್
ಮುಂದೊಂದು ದಿನ ಒಳ್ಳೆಯ ಕಾರ್ಯಕ್ರಮವನ್ನು ಸಂಘಟಿಸಿ. ಎಲ್ಲರಿಗೂ ಉತ್ತರ ಕೊಡುವ ಕೆಲಸ ಮಾಡುತ್ತೇನೆ. ನಾನು ಬಸವನಗುಡಿಯ ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ಕೊಡು ಎಂದು ಪ್ರಾರ್ಥನೆ ಮಾಡುತ್ತೇನೆ. ಶಾಲೆಯಲ್ಲಿ ರಾಜಕಾರಣ ಮಾಡಲು ಬರಬೇಡಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲು ಬರಬೇಡಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಾಜಕಾರಣ ಮಾಡಲು ಬಂದ್ರೆ ಆ ಬಸವೇಶ್ವರ ನಿಮ್ಮನ್ನ ಭಸ್ಮ ಮಾಡದೆ ಬಿಡನು. ನಾವು ಯಾವತ್ತೂ ಮುಂಬಾಗಿಲಿನಿಂದ ಬರುವವರು. ಹಿಂಬಾಗಿಲಿನಿಂದ ಬರುವವರಲ್ಲ ಎಂದು ತಿಳಿಸಿದರು. ಇದೇ ವೇಳೆ ಶಾಸಕರು, ನರೇಂದ್ರ ಮೋದಿಗೆ ಜೈಕಾರ ಹಾಕಿದರು. ಇದನ್ನೂ ಓದಿ: ನಮ್ಮ ಬಳಿ ಖಾಸಗಿ ಆಸ್ತಿ ಇದೆ ಅನ್ನೋದನ್ನ ಪ್ರೂವ್ ಮಾಡಿದ್ರೆ 1 ಕೋಟಿ ಬಹುಮಾನ ಕೊಡ್ತೀನಿ: ಯತ್ನಾಳ್
