ನವದೆಹಲಿ: ಬವಾನಾದಲ್ಲಿ ಡಬಲ್ ಮರ್ಡರ್ (Delhi Double Murder) ಆಗಿದೆ. ಗುಂಡಿಕ್ಕಿ ಯುವಕನ ಹತ್ಯೆ ಮಾಡಲಾಗಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳಲು ಹಂತಕನನ್ನೇ ಮೃತನ ಸಹೋದರ ಕೊಲೆ ಮಾಡಿದ್ದಾನೆ.
ದೆಹಲಿಯ ಬವಾನಾ (Bawana) ಪ್ರದೇಶದ ಪೂಠ್ ಖುರ್ದ್ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ಕ್ಷುಲ್ಲಕ ಜಗಳದ ಬಳಿಕ 27 ವರ್ಷದ ಸಚಿನ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಸಚಿನ್ ಎದೆಗೆ ಗುಂಡು ಹಾರಿಸಿ ಸೋನು ಅಲಿಯಾಸ್ ಪ್ರದೀಪ್ ಕೊಲೆ ಮಾಡಿದ್ದ. ಸಹೋದರನ ಹತ್ಯೆಯಿಂದ ಆಕ್ರೋಶಗೊಂಡ ನರೇಶ್ನಿಂದ ಸೋನು ಕೊಲೆಯಾಗಿದೆ. ಇದನ್ನೂ ಓದಿ: ಹಸುವನ್ನು ಕೊಂದು ಅರ್ಧಭಾಗ ತಿಂದು ಹಾಕಿದ ಹುಲಿ – ಗ್ರಾಮಸ್ಥರಲ್ಲಿ ಆತಂಕ
ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಸೋನು ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಮೂರು ಖಾಲಿ ಗುಂಡುಗಳ ಪತ್ತೆಯಾಗಿವೆ. ಸಿಸಿಟಿವಿ ದೃಶ್ಯಾವಳಿ ಮತ್ತು ಸ್ಥಳೀಯರ ವಿಚಾರಣೆಯಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಎರಡನೇ ಕೊಲೆ ಪ್ರಕರಣದಲ್ಲಿ ಸಚಿನ್ ಸಹೋದರ ನರೇಶ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಎರಡು ಕೊಲೆಗಳ ಹಿಂದಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಂಡ ಹೆಂಡತಿಯ ಜಗಳ ಬಿಡಿಸಲು ಹೋಗಿ ಮಗ ಬಲಿ – ಹಾರೆಕೋಲಿನಿಂದ ಹೊಡೆದು ಕೊಂದ ತಂದೆ
