ವಿಜಯಪುರ: ಸಿದ್ಧಸಿರಿ ಬ್ಯಾಂಕ್ ಇಡಿ, ಐಟಿ ರೇಡ್ ವದಂತಿ ವಿಚಾರಕ್ಕೆ ವಿಜಯಪುರದಲ್ಲಿ ಖುದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸ್ಪಷ್ಟನೆ ನೀಡಿದ್ದಾರೆ.
ಇಷ್ಟು ದಿನ ನಮ್ಮ ಸಿದ್ಧಸಿರಿ ರಾಜ್ಯ ಸರ್ಕಾರದ ಸಹಕಾರಿ ಇಲಾಖೆಯಲ್ಲಿ ಇತ್ತು. ನಾವೀಗ ಅದನ್ನ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿಪರ್ಪಸ್ ಬ್ಯಾಂಕ್ಗೆ ಕೇಂದ್ರ ಸಹಕಾರಿ ಇಲಾಖೆ ಅಡಿಯಲ್ಲಿ ನೋಂದಾಯಿಸಿದ್ದೇವೆ. ಸಿದ್ಧಸಿರಿಗೆ ಆಗಸ್ಟ್ ತಿಂಗಳಲ್ಲಿ ನೀಡಿದ್ದ ನೋಟಿಸ್ಗೆ ಸೆಪ್ಟೆಂಬರ್ ತಿಂಗಳಲ್ಲೇ ಉತ್ತರ ನೀಡಿದ್ದೇವೆ. ಇದು ನೋಟಿಸ್ ಅಲ್ಲ, ಕೇವಲ ಮಾಹಿತಿ ಕೇಳಿದ್ದು ಅಷ್ಟೆ. ಅದಕ್ಕೆ ನಾವು ಸಮರ್ಪಕವಾಗಿ ಉತ್ತರ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಬಳ ಕೇಳಿದ್ದಕ್ಕೆ ಡ್ರೈವರ್ ಮೇಲೆ ಮಾಲೀಕನಿಂದ ಮಾರಣಾಂತಿಕ ಹಲ್ಲೆ
ಬಳಿಕ ಆಗಸ್ಟ್ನಲ್ಲಿ ನೀಡಿದ್ದ ನೋಟಿಸ್ ವೈರಲ್ ಆಗಿತ್ತು. ಆ ನೋಟಿಸ್ ವಿಚಾರವಾಗಿ ಹಲವು ಗೊಂದಲಮಯ ಚರ್ಚೆಗಳು ನಡೆದಿವೆ. ಕೇಂದ್ರದ ಕಾನೂನು, ರಾಜ್ಯದ ಕಾನೂನು ಬೇರೆ ಬೇರೆ ಇರುತ್ತವೆ. ಆ ಪ್ರಕಾರವಾಗಿ ಕೆಲ ಸ್ಪಷ್ಟನೆ ಹಾಗೂ ರಿಕ್ವೈರ್ಮೆಂಟ್ನ್ನು ಕೇಂದ್ರ ಸಹಕಾರಿ ಇಲಾಖೆ ಕೇಳೋದು ಕಾಮನ್. ಆದರೆ, ಇದನ್ನೇ ಅವ್ಯವಹಾರವಾಗಿದೆ ಎಂದು ಗುಲ್ಲೆಬ್ಬಿಸಲಾಗಿದೆ. ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ದೂರಿದರು.
ಸಿದ್ಧಸಿರಿ ಸಕ್ಕರೆ ಕಾರ್ಖಾನೆಯ ಹಣ ದುರುಪಯೋಗ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಕ್ಕರೆ ಕಾರ್ಖಾನೆ ಮಾಲೀಕರು ಯತ್ನಾಳ್ ಅಲ್ಲ. ಕಾರ್ಖಾನೆ ಮಾಲೀಕರು ಸ್ವತಃ ಸಿದ್ಧಸಿರಿ ಸಹಕಾರಿ ಬ್ಯಾಂಕ್. ನಾನು ಬೇನಾಮಿ ಆಸ್ತಿ ಮಾಡಿದ್ದಾರೆ ಅನ್ನೋದೆಲ್ಲವೂ ಸುಳ್ಳು ಎಂದರು. ಇದನ್ನೂ ಓದಿ: ಕೆಎಎಸ್ ಪರೀಕ್ಷೆಗೆ ಬಿಗಿ ಭದ್ರತೆ; ತಾಳಿ, ಕಾಲುಂಗುರಕ್ಕೆ ಅವಕಾಶ – ಫುಲ್ ಶರ್ಟ್ ಹಾಕಿದ ಅಭ್ಯರ್ಥಿಗಳಿಗೆ ನೋ ಎಂಟ್ರಿ
ರಾಮನಗೌಡ ಬಸನಗೌಡ ಪಾಟೀಲ್ ಅಧ್ಯಕ್ಷರು ಮಾತ್ರ. ಆಸ್ತಿ ಎಲ್ಲವೂ ಸಂಸ್ಥೆಯದ್ದೆ. ನಮ್ಮ ಮನೆಯವರ ಹೆಸರಲ್ಲಿ ಒಂದೇ ಒಂದು ಗುಂಟೆ ಬೇನಾಮಿ ಲೋನ್ ಪಡೆದಿದ್ದಾರೆ ಅನ್ನೋದನ್ನ ಪ್ರೂವ್ ಮಾಡಲಿ. ಅವರು ಅಪ್ಪನಿಗೆ ಹುಟ್ಟಿದ್ರೆ ಪ್ರೂವ್ ಮಾಡಲಿ. ನಮ್ಮ ಖಾಸಗಿ ಆಸ್ತಿ ಇದೆ ಅನ್ನೋದನ್ನ ಪ್ರೂವ್ ಮಾಡಿದ್ರೆ 1 ಕೋಟಿ ಬಹುಮಾನ ಕೊಡೋದಾಗಿ ಸವಾಲೆಸೆದರು.
