ಬೆಂಗಳೂರು: ಸಂಬಳ ಕೇಳಿದ್ದಕ್ಕೆ ಮಾಲೀಕನಿಂದ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜೀವನ್ ಭೀಮಾ ನಗರದಲ್ಲಿ ನಡೆದಿದೆ.
ಡ್ರೈವರ್ ಮೋಹನ್ ಎಂಬಾತನ ಮೇಲೆ ಮಾಲೀಕ ಶ್ರೀನಿವಾಸ್ ಹಲ್ಲೆ ನಡೆಸಿದ್ದಾನೆ. ಮಾಲೀಕ ಸೇರಿ ನಾಲ್ವರು ಮೋಹನ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ವಾಟರ್ ಟ್ಯಾಂಕರ್ ಚಾಲಕನಾಗಿ ಮೋಹನ್ ಶ್ರೀನಿವಾಸ್ ಬಳಿ ಕೆಲಸ ಮಾಡುತ್ತಿದ್ದರು. ಕಳೆದ 7 ತಿಂಗಳಿಂದ ಮಾಲೀಕ ಶ್ರೀನಿವಾಸ್ ಸಂಬಳ ನೀಡಿರಲಿಲ್ಲ. ಇದೇ ಕಾರಣಕ್ಕೆ
ಮೋಹನ್ ಗಲಾಟೆ ಮಾಡಿದ್ದಾರೆ. ಇದೇ ವೇಳೆ ಮಾಲೀಕ ಶ್ರೀನಿವಾಸ ಮತ್ತು ಇತರರು ಸೇರಿ ಆತನ ಮೇಲೆ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಇದನ್ನೂ ಓದಿ: ಮದ್ವೆಯಾದ ನಾಲ್ಕೇ ತಿಂಗಳಿಗೆ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ʻನವಗ್ರಹʼ ನಟಿ ಶರ್ಮಿಳಾ ಮಾಂಡ್ರೆ!
ಗಂಭೀರವಾಗಿ ಗಾಯಗೊಂಡ ಚಾಲಕ ಮೋಹನ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಬಿ ನಗರ (ಜೀವನ್ ಭೀಮಾ ನಗರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಲೀಕ ಶ್ರೀನಿವಾಸ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಪಂಜಾಬ್ ಯಾತ್ರಾ ಯೋಜನೆಯ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ – ಐವರು ದುರ್ಮರಣ
