– ಮಕ್ಕಳು, ಸಿಬ್ಬಂದಿ ಜೊತೆ ಸಿಎಂ ಮೆಟ್ರೋ ರೈಡ್
ಬೆಂಗಳೂರು: ಪಿಂಕ್ ಲೈನ್ನಲ್ಲಿ (Pink Line Metro) ಮೊದಲ ದಿನದ ಮೆಟ್ರೋ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಯಾಣಿಸಿ, ಪ್ರಯಾಣಿಕರು, ಮಕ್ಕಳು ಹಾಗೂ ಸಿಬ್ಬಂದಿ ಜೊತೆ ಸಂಚರಿಸಿದ್ದಾರೆ.
ಇಂದಿನಿಂದ ಗುಲಾಬಿ ಮಾರ್ಗದಲ್ಲಿ ವಾಣಿಜ್ಯ ಮೆಟ್ರೋ ಸಂಚಾರ ಆರಂಭವಾಗಿದ್ದು, ಮೊದಲ ದಿನ ಬೆಳಗ್ಗೆ ಸಚಿವ ಕೃಷ್ಣ ಬೈರೇಗೌಡ ಗುಲಾಬಿ ಕೊಟ್ಟು ಸ್ವಾಗತಿಸಿದರು. ಮಧ್ಯಾಹ್ನ ಸಿಎಂ ಡಿಕೆ ಶಿವಕುಮಾರ್ ಕಾಳೇನ ಅಗ್ರಹಾರದಿಂದ ಎಸ್ಜಿ ಪಾಳ್ಯದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮೆಟ್ರೋದಲ್ಲಿ ಸಂಚರಿಸಿದ ಸಿಎಂ, ಬಿಎಂಆರ್ಸಿಎಲ್ ಸಿಬ್ಬಂದಿ, ಮಕ್ಕಳು ಹಾಗೂ ಪ್ರಯಾಣಿಕರಿಗೆ ಪೋಸ್ ಕೊಟ್ಟರು. ಇದನ್ನೂ ಓದಿ: ಹಾಸನದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ
ಈ ವೇಳೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಮೋದಿ ಡಿಕೆಶಿ ಟಿಕೆಟ್ ಖರೀದಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹತ್ರ ಕಾಸು ಇರಲಿಲ್ಲ. ಹಾಗಾಗಿ ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ ಅಂತ ಹೇಳಿದೆ. ಹೀಗಾಗಿ ಮೋದಿ ಅವರೇ ಸ್ಮಾರ್ಟ್ ಕಾರ್ಡ್ ತೆಗೆದುಕೊಂಡರು ಎಂದು ಹೇಳಿದರು. ಇದನ್ನೂ ಓದಿ: KPSC ಹಗರಣ – ಐಎಎಸ್ ಅಧಿಕಾರಿ ಗ್ಯಾನೇಂದ್ರ, ಕನ್ನಾಳೆ ವಿರುದ್ಧ ಮೊದಲ ಚಾರ್ಜ್ಶೀಟ್ ಸಲ್ಲಿಕೆ

ಇನ್ನೂ ಮೆಟ್ರೋದ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಲು ಬಂದಿದ್ದೇನೆ. ಮೆಟ್ರೋ ನಿಲ್ದಾಣಕ್ಕೆ ಲೋಕಲ್ ಕಲ್ಲುಗಳನ್ನು ಬಳಸಲು ಹೇಳಿದೆ. ಕೋಲಾರ, ಹಾಸನ, ತುಮಕೂರು ಭಾಗದ ಗ್ರಾನೈಟ್ ಕಲ್ಲುಗಳನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಬಳಸಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕಲ್ಲುಗಳನ್ನ ಇಲ್ಲೇ ಕತ್ತರಿಸಿ ಬಳಸುವುದರಿಂದ ವೆಚ್ಚವೂ ಕಡಿಮೆಯಾಗಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಆದರೆ ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಅಂತ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. 500 ಕಿಲೋ ಮೀಟರ್ ಮೆಟ್ರೋ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮೆಟ್ರೋ ಯೋಜನೆ ಶೇಕಡಾ 50:50 ಅನುದಾನ ನೀಡಿ ಅಂತಾ ಹೇಳಿದ್ದೇವೆ. ಫಾರೀನ್ ಕಂಪನಿಗಳು ಸಾಲ ನೀಡುವುದರಿಂದ ಡಾಲರ್ ಹೆಚ್ಚಾದಂತೆ ಬಡ್ಡಿ ಹೆಚ್ಚಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಬ್ಯಾಂಕ್ಗಳಿಂದಲೇ ಸಾಲ ಕೊಡಲಿ ಅಂತಾ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಗೇಟ್ ಹಾಕಿದ್ದಾಗಲೇ ಹಳಿ ದಾಟಲು ಯತ್ನ – ರೈಲು ಡಿಕ್ಕಿಯಾಗಿ 19 ವರ್ಷದ ಯುವತಿ ಸಾವು
ಇನ್ನೂ ಮಕ್ಕಳ ದಿನಾಚರಣೆಯ ಹಿನ್ನೆಲೆ ಮಕ್ಕಳೊಂದಿಗೆ ಸಮಯ ಕಳೆದ ಡಿಕೆಶಿ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಮಕ್ಕಳು ಮೊಬೈಲ್ ಫೋನ್ ಬಿಟ್ಟು ಓದಿನ ಕಡೆ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 7.5ರಷ್ಟು ಮೀಸಲಾತಿ ನೀಡುವ ವ್ಯವಸ್ಥೆಯಿದೆ. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಶುಕ್ರವಾರ ರಾತ್ರಿ ಮೊಮ್ಮಗನ ಜೊತೆ ಸ್ವಲ್ಪ ಸಮಯ ಕಳೆದಿದ್ದೇನೆ ಎಂದು ತಮ್ಮ ವೈಯಕ್ತಿಕ ಕ್ಷಣವನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿನ 3 ಪ್ರಭಾವಿ ರಾಷ್ಟ್ರಗಳ ಅಧ್ಯಕ್ಷರ ತ್ರಿಪಕ್ಷೀಯ ಮಾತುಕತೆ – ಟ್ರಂಪ್, ಕ್ಸಿ ಜಿನ್ಪಿಂಗ್, ಪುಟಿನ್ ಭೇಟಿ
