ಬೆಂಗಳೂರು: ಕೆಪಿಎಸ್ಸಿ (KPSC) ಹುದ್ದೆಗಳ ನೇಮಕಾತಿಯಲ್ಲಿ ಹಗರಣ ಕೇಸ್ ಸಂಬಂಧ ಮೊದಲ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಐಎಎಸ್ ಅಧಿಕಾರಿ ಗ್ಯಾನೇಂದ್ರ ಮತ್ತು ಕನ್ನಾಳೆ ವಿರುದ್ಧ ಇಡಿ ಅಧಿಕಾರಿಗಳು ಕೋರ್ಟ್ಗೆ ಸುಮಾರು 1,500 ಪುಟಗಳ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಗೇಟ್ ಹಾಕಿದ್ದಾಗಲೇ ಹಳಿ ದಾಟಲು ಯತ್ನ – ರೈಲು ಡಿಕ್ಕಿಯಾಗಿ 19 ವರ್ಷದ ಯುವತಿ ಸಾವು
ದೋಷಾರೋಪ ಪಟ್ಟಿಯಲ್ಲಿ ಜ.8, 9ರಂದು ವಿಲ್ಲಾಗಳ ಬುಕ್ ಮಾಡಿ, 20 ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ ಕನ್ನಾಳೆ ಬಳಿ 1 ಕೋಟಿ 70 ಲಕ್ಷ ರೂ. ಪಡೆದಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ, ಮನೆ ಮೇಲೆ ದಾಳಿ ನಡೆದಾಗ ಕೆಲ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಪಶುವೈಧ್ಯಾಧಿಕಾರಿ ಅಭ್ಯರ್ಥಿಗಳ ಹೆಸರು ಕೂಡ ಪಟ್ಟಿಯಲ್ಲಿದೆ. 1:3ರ ಅನುಪಾತದಲ್ಲಿ ಆಯ್ಕೆ ಪಟ್ಟಿ ಮಾಡಲಾಗಿದೆ. ಕೆಪಿಎಸ್ಸಿ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಪರಾಧದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ಗೆ ವರ್ಗಾಯಿಸಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಅಕ್ರಮಗಳ ಹಣೆಪಟ್ಟಿಯ ನಡುವೆಯೇ ನಾಳೆ ಕೆಎಎಸ್ ಪರೀಕ್ಷೆ ನಡೆಯಲಿದೆ. 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಹೊಸ ಹುಮ್ಮಸ್ಸಿನಲ್ಲಿ ನಾಳಿನ ಎಕ್ಸಾಂಗೆ ಭರದ ಸಿದ್ಧತೆ ನಡೆದಿದೆ.ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ರಣರೋಚಕ ಗೆಲುವು; ಅಂಡರ್-19 ಏಷ್ಯಾಕಪ್ ಗೆದ್ದ ಭಾರತ
