ಮಂಡ್ಯ: ರೈಲ್ವೇ ಗೇಟ್ ಹಾಕಿದ್ದರೂ ಲೆಕ್ಕಿಸದೇ ಹಳಿ ದಾಟಲು ಯತ್ನಿಸಿದ ಯುವತಿಯೊಬ್ಬಳಿಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಬಳಿ ನಡೆದಿದೆ.
ಚಂದಗಿರಿಕೊಪ್ಪಲು ಗ್ರಾಮದ ನಿವಾಸಿ ಲಿಖಿತಾ (19) ಮೃತ ದುರ್ದೈವಿ. ಇದನ್ನೂ ಓದಿ: ಜಗತ್ತಿನ 3 ಪ್ರಭಾವಿ ರಾಷ್ಟ್ರಗಳ ಅಧ್ಯಕ್ಷರ ತ್ರಿಪಕ್ಷೀಯ ಮಾತುಕತೆ – ಟ್ರಂಪ್, ಕ್ಸಿ ಜಿನ್ಪಿಂಗ್, ಪುಟಿನ್ ಭೇಟಿ
ರೈಲು ಬರುತ್ತಿದ್ದ ಹಿನ್ನೆಲೆ ಚಂದಗಿರಿಕೊಪ್ಪಲು ಬಳಿಯ ಲೆವೆಲ್ ಕ್ರಾಸಿಂಗ್ ಗೇಟ್ ಮುಚ್ಚಲಾಗಿತ್ತು. ಆದರೂ ಯುವತಿ ಹಳಿ ದಾಟಲು ಮುಂದಾಗಿದ್ದಾಳೆ. ರೈಲು ತೀರಾ ಹತ್ತಿರ ಬಂದಿದ್ದರೂ ಗಮನಿಸದೆ ಹಳಿ ದಾಟಲು ಯತ್ನಿಸಿದ ಪರಿಣಾಮ, ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಯುವತಿಯ ಮೃತದೇಹ ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.ಇದನ್ನೂ ಓದಿ: ರದ್ದಾಗಿದ್ದ ಟಾಸ್ಕ್ನ ರಿಸಲ್ಟ್ ಕೊಡ್ತು AI – ಈ ವಾರ ಬಿಗ್ಬಾಸ್ ಮನೆಗೆ ನೋ ಕ್ಯಾಪ್ಟನ್ ಅಂದ್ರು ಕಿಚ್ಚ
