ಬೀಜಿಂಗ್: ಜಗತ್ತಿನ ಮೂರು ಪ್ರಭಾವಿ ರಾಷ್ಟ್ರಗಳು ಎಂದು ಗುರುತಿಸಿಕೊಂಡಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಧ್ಯೆ ತ್ರಿಪಕ್ಷೀಯ ಸಭೆ ನೆಡಯಲಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ 19ರಂದು ಚೀನಾದ ಶೆನ್ಜೆನ್ನಲ್ಲಿ ನಡೆಯಲಿರುವ ಅಪೆಕ್ (ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ) ಶೃಂಗಸಭೆಯಲ್ಲಿ ಭಾಗಿಯಾಗಲಿದ್ದು, ಅಣ್ವಸ್ತ್ರ, ಇರಾನ್ ಯುದ್ಧ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅದಾಗ್ಯೂ, ರಷ್ಯಾ-ಉಕ್ರೇನ್ ಯುದ್ಧ, ಎನ್ವಿಡಿಯಾ ಬಿಕ್ಕಟ್ಟು, ಸೆಮಿಕಂಡಕ್ಟರ್ ಚರ್ಚೆಗೆ ಕೊಕ್ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ರದ್ದಾಗಿದ್ದ ಟಾಸ್ಕ್ನ ರಿಸಲ್ಟ್ ಕೊಡ್ತು AI – ಈ ವಾರ ಬಿಗ್ಬಾಸ್ ಮನೆಗೆ ನೋ ಕ್ಯಾಪ್ಟನ್ ಅಂದ್ರು ಕಿಚ್ಚ
ಈ ಮಧ್ಯೆ, ಟರ್ಕಿ-ಕತಾರ್ ಮಧ್ಯೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದ ಅಡಿ ಒಂದು ದೇಶದ ಮೇಲೆ ದಾಳಿ ನಡೆದರೆ, ಇನ್ನೊಂದು ದೇಶವು ಅದರ ಬೆಂಬಲಕ್ಕೆ ಬರಲಿದೆ. ನ್ಯಾಟೋ ಮೈತ್ರಿಕೂಟದ ರಾಷ್ಟ್ರಗಳ ಪೈಕಿ, ಟರ್ಕಿ ಎರಡನೇ ಅತಿದೊಡ್ಡ ಸೇನೆಯನ್ನು ಹೊಂದಿದ ದೇಶವಾಗಿದೆ.
