ಬೆಂಗಳೂರು: ಇಲ್ಲಿನ ರಾಜಾಜಿನಗರದಲ್ಲಿ (Rajajinagar) ಒಂದೇ ಕುಟುಂಬದ ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಂದು ಪೊಲೀಸರು ಕೊಲೆ ನಡೆದ ಸ್ಥಳದ ಮಹಜರು ನಡೆಸಿದ್ದಾರೆ.
ಆರೋಪಿ ಇಂದುಶೇಖರ್ನನ್ನು ಮನೆಗೆ ಕರೆದೊಯ್ದ ಪೊಲೀಸರು, ಕೃತ್ಯದ ಸೀನ್ಗಳನ್ನು ರೀಕ್ರಿಯೇಟ್ ಮಾಡಿ, ಪತ್ನಿ, ಅತ್ತೆ, ಬಾಮೈದುನ ಸೇರಿದಂತೆ ಏಳು ಮಂದಿಯ ಹತ್ಯೆ ಹೇಗೆ ನಡೆದಿದೆ ಅನ್ನೋದರ ಬಗ್ಗೆ ಆರೋಪಿಯಿಂದಲೇ ವಿವರಣೆ ಪಡೆದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ SC/ST ಮೀಸಲಾತಿ ಹೆಚ್ಚಿಸಲು ಮಧ್ಯ ಪ್ರವೇಶಿಸುವಂತೆ ಮೋದಿಗೆ ಪರಮೇಶ್ವರ್ ಪತ್ರ
ಹತ್ಯೆ ನಡೆದ ಮನೆಯಲ್ಲೇ ಸುದೀರ್ಘ ಮಹಜರು ಪ್ರಕ್ರಿಯೆ ನಡೆಸಿದ ಪೊಲೀಸರು, ಪ್ರತಿಯೊಂದು ಹತ್ಯೆಯ ಸಂದರ್ಭವನ್ನೂ ಮರುಸೃಷ್ಟಿ ಮಾಡಿದ್ದಾರೆ. ಕೇವಲ ಹತ್ಯೆ ನಡೆದ ಮನೆಯಲ್ಲಿ ಮಾತ್ರವಲ್ಲ, ಕೃತ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸ್ಥಳದಲ್ಲೂ ಪೊಲೀಸರು ಮಹಜರು ನಡೆಸಿದ್ದಾರೆ.
ಹಗ್ಗ ಖರೀದಿಸಿದ ಸ್ಥಳ, ಬೆಡ್ಶೀಟ್ ಖರೀದಿಸಿದ ಅಂಗಡಿ ಹಾಗೂ ಕೆಮಿಕಲ್ ಖರೀದಿಸಿದ ಸ್ಥಳಗಳಿಗೆ ಆರೋಪಿಯನ್ನ ಕರೆದೊಯ್ದಿದ್ದಾರೆ. ಈ ವಸ್ತುಗಳನ್ನ ಮಾರಾಟ ಮಾಡಿದ್ದ ವ್ಯಾಪಾರಿಗಳ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಯಶವಂತಪುರ, ರಾಜಾಜಿನಗರ ಹಾಗೂ ಆರ್ಎಂಸಿ ಯಾರ್ಡ್ ಸೇರಿದಂತೆ ನಗರದ ವಿವಿಧೆಡೆ ಮಹಜರು ಪ್ರಕ್ರಿಯೆ ನಡೆಸಲಾಗಿದೆ.ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ – ಸಿಎಂ ಡಿಕೆಶಿ ಹೇಳಿಕೆಗೆ ಮಾಣಿಕ್ಕಂ ಠಾಗೋರ್ ಕಿಡಿ
