ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಕೀಯ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಚಾರ್ಜ್ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿದೆ.
ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 1,500 ಪುಟಗಳ ಮೊದಲ ಆರೋಪ ಪಟ್ಟಿಯನ್ನ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮೊದಲು ಬಂಧನ ಆಗಿದ್ದ ಇಬ್ಬರು ಆರೋಪಿಗಳು, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಹಾಗೂ ಕಿಂಗ್ಪಿನ್ ಬಸವರಾಜ್ ಕನ್ನಾಳೆ ವಿರುದ್ಧ ಹಲವು ಆರೋಪಗಳನ್ನ ಹೊರಿಸಿದ್ದಾರೆ.

ಹಾಗಾದ್ರೆ ದೋಷಾರೋಪ ಪಟ್ಟಿಯಲ್ಲಿ ಇರೋದೇನು ?
* ಜನವರಿ 8 ಮತ್ತು 9ನೇ ತಾರೀಖು ಸಾಕಷ್ಟು ವಿಲ್ಲಾಗಳನ್ನ ಬುಕ್ ಮಾಡಲಾಗಿತ್ತು
* ಆರ್ಕಿಡ್ ನಿರ್ವಾಣ ಸೇರಿದಂತೆ ಬೇರೆ ವಿಲ್ಲಾಗಳಲ್ಲಿ 20 ಅಭ್ಯರ್ಥಿಗಳು ಟ್ರೈನಿಂಗ್ ಪಡೆದಿದ್ದಾರೆ
* ಜನವರಿ 07 ತಾರೀಖು ಎಚ್.ಪಿ ಪೆನ್ ಡ್ರೈವ್ ಮೂಲಕ ಗ್ಯಾನೇಂದ್ರ ಕನ್ನಾಳೆಗೆ ಪ್ರಶ್ನೆ ಮತ್ತು ಉತ್ತರ ನೀಡಿದ್ದ
* 2 ಪ್ರಶ್ನೆ ಪತ್ರಿಕೆಗಳ 80 ಅಂಕದ ಪ್ರಶ್ನೆಗಳನ್ನ ಪೆನ್ ಡ್ರೈವ್ ಅಲ್ಲಿ ಹಾಕಿಕೊಟ್ಟಿದ್ದ
* ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಮತ್ತು ಕನ್ನಾಳೆ ನಕಲು ಮಾಡಿದ್ದರು
* ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ ಅಲ್ಲಿ ನಕಲು ಮಾಡಲಾಗಿತ್ತು
* ನಂತರ ಟ್ಯಾಬ್ ಯಾರಿಗೂ ಸಿಗಬಾರದು ಅಂತಾ ಅದೇ ದಿನ ಟ್ಯಾಬ್ಲೆಟ್ ಅನ್ನು ಪುಡಿಪುಡಿ ಮಾಡಿ ಬಿಸಾಡಿದ್ದಾನೆ
* ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡೋದಾಗಿ ಕನ್ನಾಳೆ ಗಂಗ್ವಾರ್ ನಂಬಿಸಿದ್ದ
* ಮೊದಲು 80 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಕನ್ನಾಳೆ ಬಳಿಕ 40 ಲಕ್ಷಕ್ಕೆ ಇಳಿಸಿದ್ದಾನೆ
* ಒಟ್ಟು 1.70 ಕೋಟಿ ಕೋಟಿ ಹಣವನ್ನ ಕನ್ನಾಳೆ ಬಳಿ ಗ್ಯಾನೇಂದ್ರ ಪಡೆದುಕೊಂಡಿದ್ದಾನೆ
* 2025ರ ಅವಧಿಯಲ್ಲಿ ಗ್ಯಾನೇಂದ್ರ ತನ್ನ ಅತ್ತಿಗೆಗೆ 15,39 ಲಕ್ಷ ಹಣ ನೀಡಿದ್ದ
* ಸಹೋದರ ಬ್ಯಾಂಕ್ ಅಕೌಂಟ್ ಗೆ 10.94 ಲಕ್ಷ ಹಣ ಸಂದಾಯ ಮಾಡಿದ್ದಾನೆ
* ಅಕ್ರಮದ ಹಣವನ್ನು ಸ್ವಂತ ಹಣವನ್ನಾಗಿ ಬಿಂಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ
* ಅಧಿಕಾರಿಯ ಮನೆ ಮೇಲೆ ದಾಳಿ ನಡೆದಾಗ ಕೆಲ ದಾಖಲಾತಿ ವಶಕ್ಕೆ ಪಡೆಯಲಾಗಿದೆ
* ಇಬ್ಬರು ಪಶುವೈಧ್ಯಾಧಿಕಾರಿ ಅಭ್ಯರ್ಥಿಗಳ ಹೆಸರು ಕೂಡ ಪಟ್ಟಿಯಲ್ಲಿದೆ
* 1:3 ರ ಅನುಪಾತದಲ್ಲಿ ಆಯ್ಕೆ ಪಟ್ಟಿ ಮಾಡಲಾಗಿದೆ. ಕೆಪಿಎಸ್ಸಿಯ ಇನ್ನಿತರ ಅಧಿಕಾರಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ
* ಅಪರಾಧದಿಂದ ಬಂದ ಹಣವನ್ನ ಉಮೇಶ್ ಮತ್ತು ಓಂಕಾರ್ ಗೆ ವರ್ಗಾಯಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
