ಬೀದರ್: ರಾಂಗ್ ರೂಟ್ನಲ್ಲಿ ಬಂದು ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ತಾಲೂಕಿನ ಹನುಮಂತ ವಾಡಿ ಗ್ರಾಮದ ಬಳಿ ನಡೆದಿದೆ.
ಬೆಲೂರು ನಿವಾಸಿ 33 ವರ್ಷದ ಶಿವಕುಮಾರ್ ಕೊಪಟೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:ಕೊಂ ಕಣ ರೈಲ್ವೆ ವಿಲೀನಕ್ಕೆ 4 ರಾಜ್ಯಗಳ ಅನುಮತಿ ಅಗತ್ಯ: ಅಶ್ವಿನಿ ವೈಷ್ಣವ್
ಬೆಳಗಿನ ಜಾವ ಬೈಕ್ ಸವಾರ ಬಸವ ಕಲ್ಯಾಣದಿಂದ ಹುಮ್ನಾಬಾದ್ ಕಡೆ ಹೊರಟಿದ್ದರು. ಇದೇ ವೇಳೆ ರಾಂಗ್ ರೂಟ್ನಲ್ಲಿ ಬಂದ ಕಾರು ರಭಸವಾಗಿ ಬೈಕ್ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಯುವಕನ ನಿವಾಸದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿಯೂ ಸೂತಕದ ಛಾಯೆ ಮನೆ ಮಾಡಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದೆ.ಇದನ್ನೂ ಓದಿ: ಉಡುಪಿ | ನೂತನ FM ಪ್ರಸರಣ ಕೇಂದ್ರ ಕಾರ್ಯಾರಂಭ; 2.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
