– ಇಂದಿನ ಯೋಜನೆಗಳಿಂದ ‘ವಿಕಸಿತ ಕರ್ನಾಟಕ’ಕ್ಕೆ ವೇಗ
ಬೆಂಗಳೂರು: ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಅಮೃತ್ ಭಾರತ್ ನಿಲ್ದಾಣಗಳಾಗಿ (Amrit Bharat stations) ರೂಪುಗೊಳ್ಳಲಿವೆ ಎಂದು ಪ್ರಧಾನಿ ಮೋದಿ (PM Modi) ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ನ (Pink Line) ಮೊದಲ ಹಂತದ ಎತ್ತರಿಸಿದ ಮಾರ್ಗಕ್ಕೆ ಚಾಲನೆ ನೀಡಿದರು. ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರ್ಗವನ್ನು ತಾವರೆಕೆರೆ (ಎಸ್ಜಿ ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಲಾಯಿತು.
#WATCH | On the inauguration of the new Pink Line of Bengaluru’s Namma Metro, PM Modi says, “The success of Namma Metro is not limited to just one project. It is the result of the nation’s new vision regarding ease of living and ease of travel. It is the outcome of the country’s commitment to improving the lives of middle-class families. Today, Indian Railways is leaving behind the outdated mindsets of a bygone era. The nation’s railways are now forging a new heritage, a new legacy.
Our railway stations, our locomotives, and our rail coaches—everything now bears India’s own distinct imprint and identity. Whether it is the Vande Bharat trains or the Amrit Bharat stations, these represent a glimpse into the rail services of a ‘Viksit Bharat’. In Karnataka, too, more than 60 railway stations—including Chamarajanagar, Chikkamagaluru, Sakleshpur,
and Subramanya Road—are set to become Amrit Bharat stations.”— ANI (@ANI) November 13, 2026
ಬೆಂಗಳೂರಿನಲ್ಲಿ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿದರು. ʻʻಬೆಂಗಳೂರಿನ ನನ್ನ ಸೋದರ, ಸೋದರಿಯರಿಗೆ ನನ್ನ ನಮಸ್ಕಾರಗಳುʼʼ ಎನ್ನತ್ತಾ, ಮೊದಲಿಗೆ ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ತಾಯಿ, ನಾಡಪ್ರಭು ಕೆಂಪೇಗೌಡರಿಗೆ ನನ್ನ ಶ್ರದ್ಧಾಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ದಿನವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿಯ ಪಯಣಕ್ಕೆ ಹೊಸ ವೇಗ ನೀಡಲಿದೆ. ಬೆಂಗಳೂರಿನಿಂದ ಸಂಪರ್ಕ ಮತ್ತು ಇಂಧನ ಭದ್ರತೆಗೆ ಒತ್ತು ನೀಡುವ 15,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮೆಟ್ರೋ ಮತ್ತು ರೈಲ್ವೆಗೆ ಸಂಬಂಧಿಸಿದ ಉಪಕ್ರಮಗಳಿಂದ ಹಿಡಿದು ಇಂಧನ ಭದ್ರತೆಯವರೆಗೆ, ಈ ಎಲ್ಲಾ ಯೋಜನೆಗಳು ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಶಕ್ತಿಯನ್ನು ತುಂಬಲಿವೆ ಎಂದು ಬಣ್ಣಿಸಿದರು.
ಇಂದು ಚಾಲನೆ ನೀಡಲಾದ ಯೋಜನೆಗಳು ‘ವಿಕಸಿತ ಕರ್ನಾಟಕ’ಕ್ಕೆ ವೇಗ ನೀಡಲಿದ್ದು, ಇದು ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿವೆ. ಇಂದು ನಮ್ಮ ಮೆಟ್ರೋದ ಪಿಂಕ್ ಮಾರ್ಗವನ್ನ ಬೆಂಗಳೂರಿನ ಜನತೆಗೆ ಸಮರ್ಪಿಸಲಾಗಿದೆ. ಈ ಹೊಸ ಮೆಟ್ರೋ ಮಾರ್ಗವು ಐಐಎಂ ಬೆಂಗಳೂರು ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ. ಈ ಹೊಸ ಮೆಟ್ರೋ ಮಾರ್ಗದ ಉದ್ಘಾಟನೆಯೊಂದಿಗೆ ಅನೇಕ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳೂ ಸಹ ಸಂಪರ್ಕಗೊಳ್ಳಲಿವೆ. ದೆಹಲಿ ಎನ್ಸಿಆರ್ ಮತ್ತು ಮುಂಬೈ ಮಹಾನಗರದ ನಂತರ, ಮೆಟ್ರೋ ಜಾಲವು 100 ಕಿ.ಮೀ ತಲುಪಿದ ದೇಶದ 3ನೇ ನಗರ ಬೆಂಗಳೂರಾಗಿದೆ ಎಂದು ಶ್ಲಾಘಿಸಿದರು.

ನಮ್ಮ ಮೆಟ್ರೋದ ಯಶಸ್ಸು ಕೇವಲ ಒಂದು ಯೋಜನೆಗೆ ಸೀಮಿತವಾಗಿಲ್ಲ. ಇದು ಸುಗಮ ಜೀವನ ಮತ್ತು ಸುಗಮ ಪ್ರಯಾಣದ ಕುರಿತಾದ ರಾಷ್ಟ್ರದ ಹೊಸ ದೃಷ್ಟಿಕೋನದ ಫಲಿತಾಂಶವಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನ ಸುಧಾರಿಸಲು ದೇಶವು ಹೊಂದಿರುವ ಬದ್ಧತೆಯ ಪ್ರತಿಫಲವಿದು. ಇಂದು, ಭಾರತೀಯ ರೈಲ್ವೆಯು ಗತಕಾಲದ ಹಳೆಯ ಮನಸ್ಥಿತಿಗಳನ್ನ ಹಿಂದಿಕ್ಕಿ, ಮುಂದೆ ಸಾಗುತ್ತಿದೆ. ದೇಶದ ರೈಲ್ವೆಯು ಈಗ ಹೊಸ ಪರಂಪರೆ, ಹೊಸ ಇತಿಹಾಸವನ್ನು ನಿರ್ಮಿಸುತ್ತಿದೆ. ನಮ್ಮ ರೈಲು ನಿಲ್ದಾಣಗಳು, ನಮ್ಮ ಲೋಕೋಮೋಟಿವ್ಗಳು (ರೈಲು ಎಂಜಿನ್ಗಳು) ಮತ್ತು ನಮ್ಮ ರೈಲು ಬೋಗಿಗಳು…. ಪ್ರತಿಯೊಂದೂ ಈಗ ಭಾರತದ್ದೇ ಆದ ವಿಶಿಷ್ಟ ಛಾಪು ಮತ್ತು ಗುರುತನ್ನು ಹೊಂದಿವೆ. ಅದು ವಂದೇ ಭಾರತ್ ರೈಲುಗಳಾಗಿರಲಿ ಅಥವಾ ಅಮೃತ್ ಭಾರತ್ ನಿಲ್ದಾಣಗಳಾಗಿರಲಿ, ಇವು ‘ವಿಕಸಿತ ಭಾರತ’ದ ರೈಲು ಸೇವೆಗಳ ಒಂದು ನೋಟವನ್ನು ಪ್ರತಿನಿಧಿಸುತ್ತವೆ. ಕರ್ನಾಟಕದಲ್ಲೂ ಸಹ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಅಮೃತ್ ಭಾರತ್ ನಿಲ್ದಾಣಗಳಾಗಿ ರೂಪುಗೊಳ್ಳಲಿವೆ ಎಂದು ಹೇಳಿದರು.
