– ಜೋಶಿ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಂಡ CCPA
– ತಕ್ಷಣವೇ ಅನ್ಯಾಯದ ಪದ್ಧತಿ ನಿಲ್ಲಿಸುವಂತೆ ಆದೇಶ
ನವದೆಹಲಿ: ಪ್ರಯಾಣಕ್ಕೂ ಮುನ್ನವೇ ಹಣ ಪಾವತಿಸುವಂತೆ ಗ್ರಾಹಕರ ದಾರಿ ತಪ್ಪಿಸುತ್ತಿದ್ದ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಓಲಾ ಸಂಸ್ಥೆಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಅವರ ಸೂಚನೆಯಂತೆ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ CCPA, ಗ್ರಾಹಕರನ್ನು ವಂಚಿಸುವ ಸಂಸ್ಥೆಗಳ ವಿರುದ್ಧ ಸಮರ ಸಾರುತ್ತಲೇ ಇದ್ದು, ಇದೀಗ ಓಲಾ(Ola) ಸಂಸ್ಥೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಓಲಾ ವಿರುದ್ಧ ಕ್ರಮ ಯಾಕೆ?
ಪ್ರಯಾಣಕ್ಕೂ ಮುನ್ನವೇ ಹಣ ಪಾವತಿ ಮಾಡಿದರೆ ವೇಗವಾಗಿ ರೈಡ್ ಖಚಿತಗೊಳ್ಳುತ್ತದೆ ಎಂದು ಗ್ರಾಹಕರನ್ನು ತಪ್ಪು ದಾರಿಗೆಳೆಯಲಾಗುತ್ತಿತ್ತು. ಮೊದಲೇ ನಿಗದಿಪಡಿಸಿದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಅನ್ಯ ಮಾರ್ಗಗಳನ್ನು ಬಳಸಿ ಗ್ರಾಹಕರ ಮೇಲೆ ಒತ್ತಡ ಹೇರಲಾಗುತ್ತಿತ್ತು.
The Central Consumer Protection Authority (CCPA) has imposed a ₹10 lakh penalty on Ola for misleading pre-ride payment prompts and directed the discontinuation of the feature. A firm step against dark patterns, unfair practices and misleading claims, reaffirming the commitment to protecting consumer rights and ensuring transparency.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA), ಓಲಾ ಸಂಸ್ಥೆಯ ರೈಡ್ಗೆ ಮುನ್ನವೇ ಪಾವತಿ ಮಾಡುವಂತೆ ಗ್ರಾಹಕರನ್ನು ದಾರಿ ತಪ್ಪಿಸುವ ಸೂಚನೆಗಳನ್ನು ನೀಡಿದ್ದಕ್ಕಾಗಿ, ಓಲಾ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದೆ ಮತ್ತು ಈ ವ್ಯವಸ್ಥೆಯನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. ‘ಡಾರ್ಕ್ ಪ್ಯಾಟರ್ನ್ಗಳು’, ಅನಗತ್ಯ ಹಾಗೂ ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವ ಕ್ರಮಗಳ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
#CCPA
@jagograhakjago— Pralhad Joshi (@JoshiPralhad) November 12, 2026
ಗ್ರಾಹಕರ ನಿರ್ಧಾರಗಳ ಮೇಲೆ ಪ್ರಭಾವ ಬೀರಿ ಅವರಿಂದ ಹೆಚ್ಚುವರಿ ಹಣ ವಸೂಲಿ ಮಾಡಲು ಅನ್ಯಾಯದ ‘ಡಾರ್ಕ್ ಪ್ಯಾಟರ್ನ್ಗಳನ್ನು(Dark Patterns) ಬಳಸುತ್ತಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಂಸತ್ ವಿಶೇಷ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಹ್ಲಾದ್ ಜೋಶಿ, ಡಾರ್ಕ್ ಪ್ಯಾಟರ್ನ್ಗಳು, ಅನಗತ್ಯ ಹಾಗೂ ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವ ಕ್ರಮಗಳ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಾಗೂ ಡಿಜಿಟಲ್ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.
