ಬೆಂಗಳೂರು: ಇಡೀ ನಗರವನ್ನೇ ಬೆಚ್ಚಿಬೀಳಿಸಿರೋ ರಾಜಾಜಿನಗರದ (Bengaluru 7 Murder) ಆ 7 ಜನರ ಸರಣಿ ಕೊಲೆ ಕೇಸ್ನಲ್ಲಿ ತನಿಖೆ ಈಗ ಮತ್ತೊಂದು ಹಂತಕ್ಕೆ ಬಂದಿದೆ. ಇಷ್ಟು ದಿನ ತಮಿಳುನಾಡಿನ ಸೇಲಂ, ನಂದಿಬೆಟ್ಟ, ಚಾಮುಂಡಿ ಬೆಟ್ಟ ಹಾಗೂ ಚಾರ್ಮಾಡಿ ಘಾಟ್ನಂತಹ ಕಾಡು-ಮೇಡುಗಳಲ್ಲಿ (Crime) ಶವ ಪತ್ತೆ ಹಚ್ಚಿ, ಮಹಜರು ಮುಗಿಸಿದ್ದ ಪೊಲೀಸರು, ಈಗ ಸಿಟಿ ಒಳಗಡೆ ತನಿಖೆ ಶುರು ಮಾಡಿದ್ದಾರೆ.
ಹಂತಕ ಇಂದುಶೇಖರ್ ಮತ್ತು ಆತನ ಮಗಳನ್ನು ಪೊಲೀಸರು ನಿನ್ನೆಯಿಂದಲೇ ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ಕೊಟ್ಟಿರೋ ಸ್ಟೇಟ್ಮೆಂಟ್ಗಳ ಆಧಾರದ ಮೇಲೆ ಪೊಲೀಸರು ಒಂದು ಕಂಪ್ಲೀಟ್ ಮ್ಯಾಪ್ ರೆಡಿ ಮಾಡಿಕೊಂಡಿದ್ದಾರೆ. ಆ ಮ್ಯಾಪ್ ಪ್ರಕಾರ ಇಂದಿನಿಂದ ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಮಹಜರು ಪ್ರಕ್ರಿಯೆ (Spot Inspection) ನಡೆಯುತ್ತಿದೆ.
ಕೊಲೆ ನಡೆದ ಶ್ರೀರಾಮಪುರದ ಮನೆ, ಕೃತ್ಯಕ್ಕೆ ಬಳಸಿದ ಕೆಮಿಕಲ್, ಬಾಡಿ ಪ್ಯಾಕ್ ಮಾಡಲು ತಂದಿದ್ದ ಟೇಪ್ ಮತ್ತು ಚೀಲಗಳನ್ನು ಖರೀದಿ ಮಾಡಿದ ಜಾಗಗಳಿಗೆ ಹಂತಕನನ್ನು ಕರೆದೊಯ್ದು ತನಿಖೆ ಮಾಡಲಾಗುತ್ತಿದೆ.ಇದನ್ನೂ ಓದಿ: ದೀಪಾವಳಿ ಪಟಾಕಿ ಎಫೆಕ್ಟ್; ಸಿಲಿಕಾನ್ ಸಿಟಿಯಲ್ಲಿ ಆವರಿಸಿದ ವಿಷಗಾಳಿ
ಯಶವಂತಪುರ, ಆರ್ಎಂಸಿ ಯಾರ್ಡ್ ಹಾಗೂ ರಾಜಾಜಿನಗರದ ಹಲವು ಅಂಗಡಿಗಳಲ್ಲಿ ಈತ ವಸ್ತುಗಳನ್ನು ಖರೀದಿ ಮಾಡಿದ್ದಾಗಿ ಗೊತ್ತಾಗಿದೆ. ಆರೋಪಿಗಳು ಹೇಳ್ತಿರೋ ಕಥೆ ನಿಜನಾ ಅಲ್ವಾ ಅಂತ ಕ್ರಾಸ್ ಚೆಕ್ ಮಾಡಲು ಪೊಲೀಸರು ಅವರ ಹೇಳಿಕೆ ಹಾಗೂ ಮರ್ಡರ್ ನಡೆದ ಟೈಮ್ಲೈನ್ ಅನ್ನು ಮ್ಯಾಚ್ ಮಾಡಿ ನೋಡುತ್ತಿದ್ದಾರೆ.ಇದನ್ನೂ ಓದಿ: 11 ದಿನದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬೆ ದರ್ಶನ – ಇಂದು ದೇವಾಲಯದ ಗರ್ಭಗುಡಿ ಬಾಗಿಲು ಬಂದ್
