* ಇತಿಹಾಸ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ
* 25 ಕೋಟಿ ರೂ. ಆದಾಯ ಸಂಗ್ರಹ
ಹಾಸನ: ಕಳೆದ 11 ದಿನಗಳ ಅವಧಿಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇಂದು ಹಾಸನಾಂಬ ದೇವಾಲಯದ (Hasanamba Temple) ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.
ಕೊನೆ ದಿನವಾದ್ದರಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಭಕ್ತರು ನಿರಂತರ ಹಾಸನಾಂಬೆ ದರ್ಶನ ಪಡೆದರು. ಇಂದು ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಇದನ್ನೂ ಓದಿ: 28 ಲಕ್ಷ ಭಕ್ತರಿಂದ ಹಾಸನಾಂಬ ದೇವಿ ದರ್ಶನ – ಬರೋಬ್ಬರಿ 24 ಕೋಟಿಗೂ ಅಧಿಕ ಆದಾಯ
ಕೆಲವೇ ಕ್ಷಣಗಳಲ್ಲಿ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ ನೆರವೇರಲಿದೆ. ಈ ಹಿನ್ನೆಲೆ ದೇವಾಲಯದ ಮುಂದೆ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದಾರೆ.
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ. ಅ.30 ರಿಂದ ನ.11 ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. 1000 ರೂ., 300 ರೂ.ನ ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಮಾರಾಟದಿಂದ 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆ ದಿನ – ನಾಳೆ ದೇವಾಲಯದ ಗರ್ಭಗುಡಿ ಬಂದ್
