ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಬಹುನೀರಿಕ್ಷಿತ ಮೆಟ್ರೋ ಮಾರ್ಗದ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಬ್ಲೂ ಲೈನ್ ಅನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು ಸಿದ್ಧ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶೀಘ್ರ ಮಾರ್ಗದ ಟೆಸ್ಟಿಂಗ್ ಆರಂಭಿಸುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಬೈಯಪ್ಪನಹಳ್ಳಿ ಡಿಪೋದಲ್ಲಿ ಮಾರ್ಗದ ನೂತನ ಚಾಲಕ ರಹಿತ ರೈಲಿನ ಪ್ರಾಥಮಿಕ ಪರೀಕ್ಷಾರ್ಥ ಪರೀಕ್ಷೆ ಯಶಸ್ವಿಯಾಗಿ ಸಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಮೆಟ್ರೋ ಬ್ಲೂ ಲೈನ್ ಮುಖ್ಯ ಮಾರ್ಗ ಪರೀಕ್ಷೆಗೆ ಒಂದು ಹೆಜ್ಜೆ ಹತ್ತಿರವಾಗುತ್ತಿದೆ. ನಮ್ಮ ಸರ್ಕಾರವು ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಬ್ಲೂ ಲೈನ್ ಅನ್ನು ಸಾರ್ವಜನಿಕರಿಗೆ ಆದಷ್ಟು ಬೇಗ ತೆರೆಯಲು, ಬೆಂಗಳೂರಿನ ಸಂಪರ್ಕವನ್ನು ಬಲಪಡಿಸಲು ಮತ್ತು ನಗರ ಚಲನಶೀಲತೆಯನ್ನು ಪರಿವರ್ತಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
