ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಪಿಆರ್ಒ ಪ್ರಜ್ವಲ್ ಪ್ರಸಾದ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು (ನ.1) 66ನೇ ಸೆಷನ್ಸ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಪ್ರಸಾದ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದ ಎಸ್ಪಿಪಿಯಾಗಿ ನೇಮಕರಾಗಿರುವ ಬಿ.ಎನ್ ಜಗದೀಶ್ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಛಿದ್ರವಾಗುವ ಹಂತಕ್ಕೆ ಬಂತು ಸಿದ್ದರಾಮಯ್ಯ ಕೋರ್ ಟೀಂ!
ಈಗಾಗಲೇ ಪ್ರಕರಣದಲ್ಲಿ ಪ್ರಜ್ವಲ್ ಪ್ರಸಾದ್ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಸದ್ಯ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು, ನಾಪತ್ತೆಯಾಗಿದ್ದಾರೆ.
ಸ್ಟಿಂಗ್ ಕೇಸ್ನಲ್ಲಿ ಪ್ರಜ್ವಲ್ ಪ್ರಸಾದ್ ಮೊಬೈಲ್ ಖರೀದಿಸಿ, ಅದನ್ನು ದೆಹಲಿಯ ಕುಮಾರಸ್ವಾಮಿ ಸರ್ಕಾರಿ ನಿವಾಸದಲ್ಲಿ ಆರೋಪಿ ರಿತೇಶ್ ಪಾಂಡೆಗೆ ಕೊಟ್ಟಿದ್ದರು ಎಂದು ಆರೋಪ ಕೇಳಿಬಂದಿದ್ದು, ಇದೇ ಸಂಬಂಧ ವಿಚಾರಣೆ ನಡೆಸಲು ಸೈಬರ್ ಕ್ರೈಮ್ ಪೊಲೀಸರು ಮುಂದಾಗಿದ್ದಾರೆ.ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ‘ಮುರುಸು’ ಚಂಡಮಾರುತ; ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಹೈ ಅಲರ್ಟ್
