ಕಾರವಾರ: ಗೋಕರ್ಣದ (Gokarna) ದುಬ್ಬನಶಶಿ ಬೀಚ್ನಲ್ಲಿ (Dubbanashashi Beach) ಮುಳುಗಿ ನಾಪತ್ತೆಯಾಗಿದ್ದ ಬೆಂಗಳೂರಿನ 24 ವರ್ಷದ ಯುವಕ ವಿಶ್ವೇಶ್ ಎ.ಕೆ ಅವರ ಮೃತದೇಹ ಸೋಮವಾರ ಬೆಳಗಿನ ಜಾವ ಪತ್ತೆಯಾಗಿದೆ.
ನ.1ರಂದು ಬೆಳಿಗ್ಗೆ ಸುಮಾರು 7:30ರ ವೇಳೆಗೆ ದುಬ್ಬನಶಶಿ ಬೀಚ್ನಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ವಿಶ್ವೇಶ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ವೇಳೆ ಸಮುದ್ರದ ಭಾರಿ ಅಲೆಗಳಿಗೆ ಸಿಲುಕಿದ್ದ ಪ್ರವಾಸಿಗರ ಪೈಕಿ ಇಬ್ಬರು ಮೃತಪಟ್ಟಿದ್ದು, ಕೆಲವರನ್ನು ರಕ್ಷಿಸಲಾಗಿತ್ತು. ಈ ಘಟನೆಯಲ್ಲಿ ವಿಶ್ವೇಶ್ ನಾಪತ್ತೆಯಾಗಿದ್ದರು. ಇದನ್ನೂ ಓದಿ: ನನ್ನ ಮೇಲೆ ಇಡಿ, ಐಟಿ ಅಸ್ತ್ರ ಪ್ರಯೋಗಕ್ಕೆ ಕೇಂದ್ರ ಸಚಿವರ ಒತ್ತಡ: ಪ್ರಿಯಾಂಕ್ ಆರೋಪ
ನಾಪತ್ತೆಯಾಗಿದ್ದ ವಿಶ್ವೇಶ್ಗಾಗಿ ಗೋಕರ್ಣ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಎಸ್ಐಟಿ ಮುಖ್ಯಸ್ಥರಿಂದ ಸೌಜನ್ಯ ಪೋಷಕರಿಗೆ ಬುಲಾವ್
ಸೋಮವಾರ ಬೆಳಗಿನ ಜಾವ ಸುಮಾರು 1:45ಕ್ಕೆ ದುಬ್ಬನಶಶಿ ಬೀಚ್ ಸಮೀಪ ವಿಶ್ವೇಶ್ ಅವರ ಮೃತದೇಹ ಪತ್ತೆಯಾಗಿದೆ. ಮೃತರು ಆನಂದ ಕುಲಾಲ್ ಅವರ ಪುತ್ರ ವಿಶ್ವೇಶ್ ಎ.ಕೆ. (24) ಆಗಿದ್ದು, ಬೆಂಗಳೂರಿನ ಬಾಬುಸಾಪಾಳ್ಯ ನಿವಾಸಿಯಾಗಿದ್ದಾರೆ. ಪ್ರಕರಣ ಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 417ಕ್ಕೆ ಏರಿಕೆ – ಸವಾರರಿಗೆ ಮೊದಲ ದಿನವೇ 68.4 ಲಕ್ಷ ದಂಡ
