ಬೆಂಗಳೂರು: ತನ್ನ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ (IT) ಮತ್ತು ಜಾರಿ ನಿರ್ದೇಶನಾಲಯವನ್ನು (ED) ಛೂಬಿಡಲು ಕೇಂದ್ರ ಸಚಿವರೊಬ್ಬರು ಪ್ರಧಾನಿ ಮೋದಿ(Narendra Modi) ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದಾಳಿ ನಡೆಸಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ದೆಹಲಿಯ ಅಧಿಕಾರದ ಕಾರಿಡಾರ್ನಲ್ಲಿ ಮಾತುಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.
Whispers in Delhi’s corridors of power is that a Union Minister is desperately pressuring Modi Sarkar to weaponise the IT and ED against my Cabinet colleagues and me, using the KPSC investigation as political cover.
The RSS’s newest Group D recruit is also reportedly attempting to use the ED to pressure all accused to falsely implicate Congress leaders and me in the KPSC recruitment case.
It appears the “extremely hard working” Hon’ble Minister is not prepared to go down alone. In his desperation, he seems determined to drag his own coalition partners down with him.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 2, 2026
ಕೆಪಿಎಸ್ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ನನ್ನ ಹೆಸರನ್ನು ಸುಳ್ಳಾಗಿ ಸಿಲುಕಿಸಲು ಆರೋಪಿಗಳ ಮೇಲೆ ಇಡಿ ಮೂಲಕ ತೀವ್ರ ಒತ್ತಡ ಹೇರಲಾಗುತ್ತಿದೆ. ಆರ್ಎಸ್ಎಸ್ನ ಇತ್ತೀಚಿನ ‘ಗ್ರೂಪ್-ಡಿ’ ನೇಮಕಾತಿಯಂತಿರುವ ವ್ಯಕ್ತಿಯೊಬ್ಬರು ಈ ಹುನ್ನಾರದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಕೇಸ್ಗೆ ಬಿಗ್ ಟ್ವಿಸ್ಟ್: ಹೆಚ್ಡಿಕೆ ದೆಹಲಿ ನಿವಾಸ ಮಹಜರ್ಗೆ ಸಿಸಿಬಿ ತಯಾರಿ?
