ಫ್ರಾಂಕ್ಫರ್ಟ್: ಜರ್ಮನಿಯ(Germany) ಆರ್ಥಿಕ ರಾಜಧಾನಿ ಫ್ರಾಂಕ್ಫರ್ಟ್ನಲ್ಲಿ(Frankfurt) ಶನಿವಾರ ರಾತ್ರಿ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ(Violent Protest) ತಿರುಗಿದ್ದು, ದುಷ್ಕರ್ಮಿಗಳು ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ ಪೊಲೀಸರ(Police) ಮೇಲೂ ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹದಿಹರೆಯದವರು ಸೇರಿದಂತೆ ಒಟ್ಟು 54 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 1ರಂದು ಫ್ರಾಂಕ್ಫರ್ಟ್ ನಗರದ ಕೇಂದ್ರ ಭಾಗದಲ್ಲಿ ನಡೆದ ರ್ಯಾಲಿಯ ನಂತರ ಈ ಗಲಭೆ ಆರಂಭವಾಯಿತು. ಸುಮಾರು 8,000ದಿಂದ 9,000 ಜನರು ಭಾಗಿಯಾಗಿದ್ದ ಪ್ರತಿಭಟನೆ ಶಾಂತರೂಪದಲ್ಲಿ ನಡೆಯುತ್ತಿತ್ತು. ಈ ಮಧ್ಯೆ 1,000ದಿಂದ 1,500 ಜನರಿದ್ದ ಪುಂಡರ ಗುಂಪೊಂದು ಏಕಾಏಕಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. 17ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಹಾನಿಯಾಗಿದ್ದು, ಐದು ಅಂಗಡಿಗಳನ್ನು ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ.
Riots and looting in Frankfurt tonight.
You had enough yet?
https://t.co/gtGARXNFGY— Tommy Robinson 🇬🇧 (@TRobinsonNewEra) October 31, 2026
ಹಿಂಸಾಚಾರದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಸ್ಸೆ ರಾಜ್ಯದ ಆಂತರಿಕ ಸಚಿವ ರೋಮನ್ ಪೊಸೆಕ್, ಇದೊಂದು ಭಯಾನಕ ಹಿಂಸಾತ್ಮಕ ರಾತ್ರಿ ಎಂದು ಖಂಡಿಸಿದ್ದಾರೆ. ಎಡಪಂಥೀಯ ಉಗ್ರರು ಮೊದಲು ಗಲಭೆಗೆ ಪ್ರಚೋದನೆ ನೀಡಿದ್ದು, ಬಳಿಕ ವಲಸಿಗ ಹಿನ್ನೆಲೆಯ ಯುವಕರು ದಾಳಿ ಮತ್ತು ಲೂಟಿಯಲ್ಲಿ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಂಧಿತ 54 ಆರೋಪಿಗಳು 13ರಿಂದ 25 ವರ್ಷದವರಾಗಿದ್ದು, ಬಹುತೇಕರು ಜರ್ಮನ್ ನಾಗರಿಕರಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಫ್ರಾಂಕ್ಫರ್ಟ್ ಮೇಯರ್ ಮೈಕ್ ಜೋಸೆಫ್ ಮಾತನಾಡಿ, “ಪೊಲೀಸರ ಮೇಲೆ ದಾಳಿ ನಡೆಸುವವರು, ಅಂಗಡಿಗಳನ್ನು ಲೂಟಿ ಮಾಡುವವರು ಅಥವಾ ಸಾರ್ವಜನಿಕರಿಗೆ ಬೆದರಿಕೆ ಹಾಕುವವರ ವಿರುದ್ಧ ಅವರ ಮೂಲ ಅಥವಾ ರಾಷ್ಟ್ರೀಯತೆಯನ್ನು ನೋಡದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ. ಭಾನುವಾರ ಬೆಳಗಿನ ಜಾವದ ವೇಳೆಗೆ ನಗರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆಯಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 1,300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
🇩🇪 Rioters smashed store windows in Frankfurt, Germany, on Saturday night. Some even raided a gun shop.
After dark, rioters threw Molotov cocktails and stones at police during the protests.
Special police units moved in, and police arrested 30 people. Hesse’s interior minister blamed left-wing extremists and violent youths.
— NewsForce (@Newsforce) November 1, 2026
ಉತ್ತಮ ಶಿಕ್ಷಣ, ಕೈಗೆಟುಕುವ ದರದ ವಸತಿ ಸೌಲಭ್ಯ, ಹವಾಮಾನ ಸಂರಕ್ಷಣೆ ಮತ್ತು ಜೀವನ ವೆಚ್ಚ ಏರಿಕೆಯನ್ನು ವಿರೋಧಿಸಿ ಅಕ್ಟೋಬರ್ 31ರಂದು ಯುವ ಸಂಘಟನೆ ‘ಜೆನ್ ಝಡ್ ರೆಗೆಲ್ಟ್’ (Gen Z regelt) ನೇತೃತ್ವದಲ್ಲಿ ಜರ್ಮನಿಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಯುವಕರು ಬೀದಿಗಿಳಿದಿದ್ದರು. ಸಂಘಟನೆಯು ಶಾಂತಿಯುತ ಹೋರಾಟಕ್ಕೆ ಕರೆ ನೀಡಿತ್ತಾದರೂ, ಕೆಲವು ಕಿಡಿಗೇಡಿಗಳ ಗುಂಪು ಹಿಂಸಾಚಾರಕ್ಕೆ ತಿರುಗಿಸಿದೆ.
ಫ್ರಾಂಕ್ಫರ್ಟ್ ಮಾತ್ರವಲ್ಲದೆ ಕಲೋನ್ ನಗರದಲ್ಲಿ ಜಲಫಿರಂಗಿ ಬಳಸಿ ಗುಂಪನ್ನು ಚದುರಿಸಲಾಗಿದ್ದು, ರಾಜಧಾನಿ ಬರ್ಲಿನ್ನಲ್ಲೂ ಪೊಲೀಸರ ಮೇಲೆ ಬಾಟಲಿ ಹಾಗೂ ಪಟಾಕಿಗಳನ್ನು ಎಸೆದು ದಾಳಿ ನಡೆಸಲಾಗಿದೆ. ಯುರೋಪಿನಾದ್ಯಂತ ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಯುವಜನರು ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಈ ಬೆಳವಣಿಗೆಗಳು ಕಂಡುಬಂದಿವೆ.
