ದಸರಾ ಹಬ್ಬಕ್ಕೆ ವೈಲ್ಡ್ ಕಾರ್ಡ್ (Wild Card) ಸ್ಪರ್ಧಿಯಾಗಿ ಬಿಗ್ಬಾಸ್ (Bigg Boss) ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ಕೊಟ್ಟಿದ್ದ ಅಗ್ನಿಪರೀಕ್ಷೆಯ ಕುಮಾರಿ (Kumari) ಇದೀಗ ಎಲಿಮಿನೇಟ್ ಆಗಿದ್ದಾರೆ.
ಅಗ್ನಿಪರೀಕ್ಷೆಯಲ್ಲಿ ಕುಮಾರಿ ನಮ್ಮ ನೇರ ನುಡಿಯ ಮೂಲಕವೇ ಜನರ ಮನಗೆದ್ದಿದ್ದರು. ಅದರಂತೆ ಅದೇ ನೇರನುಡಿಯನ್ನೇ ಅವರು ಬಿಗ್ಬಾಸ್ ಮನೆಯಲ್ಲಿ ಮುಂದುವರಿಸಿದ್ದರು. ಆದರೆ ಕಳೆದೊಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಟವಾಡಲು ಆಗಿರಲಿಲ್ಲ. ಇದೇ ಅವರಿಗೆ ಹಿನ್ನಡೆಯಾಗಿ ಈ ವಾರ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ಉತ್ತಮ ಪ್ರದರ್ಶನ ನೀಡಿ ವಾರದ ಕ್ಯಾಪ್ಟನ್ ಆದ ಜಗ್ಗ ಮಮ್ಮಿ @ ಜಗದೀಶ್
ಈ ವಾರ ಎಲಿಮಿನೇಷನ್ ಆದ ಸ್ಪರ್ಧಿ: ಕುಮಾರಿ
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKBBKElimination https://t.co/vK6SuCQJQc
— Colors Kannada (@ColorsKannada) November 1, 2026
ಬಿಗ್ಬಾಸ್ ಅಗ್ನಿಪರೀಕ್ಷೆಯ ಸ್ಪರ್ಧಿಗಳಾಗಿದ್ದ ಕುಮಾರಿ ಹಾಗೂ ಲಕ್ಷ್ಮೀ ದಸರಾ ಹಬ್ಬದ ಸಂಭ್ರಮದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಲೂಟಿಕೋರರು ಹಾಗೂ ಸೆಕ್ಯೂರಿಟಿ ಟಾಸ್ಕ್ನಲ್ಲಿ ಲಕ್ಷ್ಮೀ ಹಾಗೂ ಕುಮಾರಿ ಅದ್ಭುತವಾಗಿಯೇ ಆಡಿದ್ದರು. ಆದರೆ ಆ ವಾರವೇ ಲಕ್ಷ್ಮೀ ಮನೆಯಿಂದ ಎಲಿಮಿನೇಟ್ ಆಗಿದ್ದರು.
ಈ ವಾರ ಆಸಿಯಾ, ಧನುಷ್, ಗಗನ್, ಕಿರಣ್ ಶಾಸ್ತ್ರಿ, ಪ್ರಶಾಂತ್, ಜಗದೀಶ್, ಕುಮಾರಿ ನಾಮಿನೇಟ್ ಆಗಿದ್ದರು. ನಾಮಿನೇಷನ್ ಟಾಸ್ಕ್ ಬಳಿಕ ಕುಮಾರಿಗೆ ಹುಷಾರಿರಲಿಲ್ಲ. ಹೀಗಾಗಿ ಅವರು ಟಾಸ್ಕ್ನಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. ಇದೇ ಕಾರಣದಿಂದಾಗಿಯೇ ಈ ವಾರ ಮನೆಯಿಂದ ಹೊರಬಂದಿದ್ದಾರೆ.ಇದನ್ನೂ ಓದಿ: ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್ನ ಚಿತ್ರಕ್ಕೆ ಮುಹೂರ್ತ
