ಶಿವಮೊಗ್ಗ: ಆಕ್ಸಲ್ ತುಂಡಾಗಿ KSRTC ಬಸ್ ಪಲ್ಟಿಯಾದ ಘಟನೆ ಸಾಗರದ (Sagar) ಬಾಪಟ್ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಬಸ್ ಬೆಂಗಳೂರಿನಿಂದ (Bengaluru) ಸಾಗರಕ್ಕೆ ತೆರಳುತ್ತಿತ್ತು. ಈ ವೇಳೆ ಆಕ್ಸಲ್ ಬ್ಲೇಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್ನಲ್ಲಿ 41 ಜನ ಪ್ರಯಾಣಿಕರಿದ್ದರು. ಅದರಲ್ಲಿ ಚಾಲಕ, ನಿರ್ವಾಹಕ ಸೇರಿ 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಯೂಟ್ಯೂಬರ್ ಮಧು ಗೌಡ ಪತಿ ವಿರುದ್ಧ ಹಿಟ್ & ರನ್ ಆರೋಪ – FIR ದಾಖಲು, ಕಾರು ಸೀಜ್
ಗಾಯಾಳುಗಳಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ಸಾಗರ ಟೌನ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಡಿಕೇರಿ | ಆಟೋದಲ್ಲೇ ಡ್ರಗ್ಸ್ ಇಟ್ಟುಕೊಂಡು ಮಾರಾಟಕ್ಕೆ ಸ್ಕೆಚ್ – 4.04 ಲಕ್ಷ ಮೌಲ್ಯದ MDMA ವಶ; ಇಬ್ಬರ ಬಂಧನ
