ರುಚಿಕರವಾದ ಮತ್ತು ಬಾಯಲ್ಲಿ ನೀರೂರಿಸುವ ಪಂಜಾಬಿ ರೋಲ್ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸಂಜೆ ಸ್ನ್ಯಾಕ್ಸ್ಗೆ ಇದು ಅತ್ಯುತ್ತಮ ಆಯ್ಕೆಯಾಗಿದ್ದು, ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಗ್ರಿಗಳು:
ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
ಎಣ್ಣೆ ಅಥವಾ ತುಪ್ಪ
ಪನೀರ್ ಅಥವಾ ಚಿಕನ್ ತುಂಡುಗಳು
ಈರುಳ್ಳಿ
ಕ್ಯಾಪ್ಸಿಕಮ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಅರಿಶಿನ ಪುಡಿ
ಖಾರದ ಪುಡಿ
ಚಾಟ್ ಮಸಾಲಾ
ಮೊಸರು
ನಿಂಬೆ ರಸ
ಎಣ್ಣೆ
ಉಪ್ಪು
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಮೈದಾ ಅಥವಾ ಗೋಧಿ ಹಿಟ್ಟು, ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ, ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆದುವಾಗಿ ಕಲಸಿ, ಬಟ್ಟೆ ಮುಚ್ಚಿ 20 ನಿಮಿಷ ನೆನೆಯಲು ಬಿಡಿ.
ಒಂದು ಬೌಲ್ನಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ, ಗರಂ ಮಸಾಲಾ, ಚಾಟ್ ಮಸಾಲಾ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದರೊಂದಿಗೆ ಪನೀರ್ ಅಥವಾ ಚಿಕನ್ ತುಂಡುಗಳನ್ನು ಸೇರಿಸಿ 15 ನಿಮಿಷ ಮ್ಯಾರಿನೇಟ್ ಮಾಡಿ. ಬಳಿಕ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಮ್ಯಾರಿನೇಟ್ ಮಾಡಿದ ಮಿಶ್ರಣವನ್ನು ಹಾಕಿ ಹೈ ಫ್ಲೇಮ್ನಲ್ಲಿ ಚೆನ್ನಾಗಿ ಫ್ರೈ ಮಾಡಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ 2-3 ನಿಮಿಷ ಬಾಡಿಸಿ. ಕೊನೆಯಲ್ಲಿ ನಿಂಬೆ ರಸ ಹಿಂಡಿ ಸ್ಟವ್ ಆಫ್ ಮಾಡಿ.
ನೆನೆಸಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ. ಗೋಧಿ ಹಿಟ್ಟಿನ ಸಹಾಯದಿಂದ ತೆಳುವಾದ ಚಪಾತಿಯಂತೆ ಅಥವಾ ಪರೋಟಾದಂತೆ ಲಟ್ಟಿಸಿ. ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಸವರಿ, ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಚೆನ್ನಾಗಿ ಬೇಯಿಸಿ.
ತಯಾರಾದ ಪರೋಟಾವನ್ನು ತಟ್ಟೆಯ ಮೇಲೆ ಇಡಿ. ಅದರ ಮಧ್ಯಭಾಗದಲ್ಲಿ ಹಸಿರು ಚಟ್ನಿ ಮತ್ತು ಟೊಮೆಟೊ ಸಾಸ್/ಮಯೋನೆಸ್ ಸವರಿ. ಈಗ ಸಿದ್ಧಪಡಿಸಿಟ್ಟ ಪನೀರ್/ಚಿಕನ್ ಸ್ಟಫಿಂಗ್ ಅನ್ನು ಉದ್ದನೆಯ ಸಾಲಿನಂತೆ ಇರಿಸಿ. ಅದರ ಮೇಲೆ ಸ್ವಲ್ಪ ಹಸಿಯಾದ ಈರುಳ್ಳಿ ಮತ್ತು ಚಾಟ್ ಮಸಾಲಾ ಉದುರಿಸಿ. ಪರೋಟಾವನ್ನು ಬಿಗಿಯಾಗಿ ಸಿಲಿಂಡರ್ ಆಕಾರದಲ್ಲಿ ಸುತ್ತಿಕೊಳ್ಳಿ. ರುಚಿಕರವಾದ ಮತ್ತು ಬಿಸಿಬಿಸಿಯಾದ ಪಂಜಾಬಿ ರೋಲ್ ಸವಿಯಲು ಸಿದ್ಧ!
ಆರೋಗ್ಯದ ದೃಷ್ಟಿಯಿಂದ ಮೈದಾ ಬದಲು ಪೂರ್ಣವಾಗಿ ಗೋಧಿ ಹಿಟ್ಟು ಬಳಸಿ ಮತ್ತು ಮನೆಯಲ್ಲೇ ತಯಾರಿಸಿದ ಹಸಿರು ಚಟ್ನಿ ಬಳಸಿದರೆ ಇದು ಮತ್ತಷ್ಟು ರುಚಿಕರ ಹಾಗೂ ಪೌಷ್ಟಿಕವಾಗಿರುತ್ತದೆ.




