-ರಾಜ್ಯದಲ್ಲಿ SIR ಸರಿಯಾಗಿ ನಡೆದಿದೆ ಅಂತ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ (SIR) ಸರಿಯಾಗಿ ನಡೆದಿದೆ ಅಂತ ನಿನ್ನೆ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ನನ್ನ ಜಿಲ್ಲೆ ಹಾಗೂ ಕ್ಷೇತ್ರದ ವಿಚಾರವಾಗಿ ಅಷ್ಟೇ ನಾನು ಹೇಳಿಕೆ ನೀಡಿದ್ದೆ. ಅದು ವಿವಾದ ಆಗುತ್ತೆ ಅಂತ ಎಂದುಕೊಂಡಿರಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟನೆ ನೀಡಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಎಸ್ಐಆರ್ ವಿಚಾರದಲ್ಲಿ ನಾನು ಹೇಳಿಕೆ ಕೊಟ್ಟ ನಂತರ ಕೆಲವರು ಎಸ್ಐಆರ್ನಲ್ಲಿ ಗೊಂದಲ ಆಗಿರುವ ಬಗ್ಗೆ ನನ್ನ ಗಮನಕ್ಕೆ ತಂದರು. ಕೆಲವು ಕ್ಷೇತ್ರದಲ್ಲಿ ಡಿಲೀಟ್ ಆಗಿದೆ, ಕೆಲವು ಕಡೆ ಗೊಂದಲ ಆಗಿದೆ ಅಂತ ಗೊತ್ತಾದ ಕಾರಣ ಸ್ಪಷ್ಟನೆ ನೀಡಿದ್ದೇನೆ. ಆದರೆ ನಾನು ನನ್ನ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಸಂಬಂಧವಾಗಿ ಹೇಳಿದೆ. ಆದರೆ ಬಳಿಕ ಇದು ಜೋರಾಗಿ ಚರ್ಚೆ ಆಗಿದೆ. ಬೆಂಗಳೂರು ಸಿಟಿ ಸೇರಿದಂತೆ ಹಲವು ಕಡೆ ಹತ್ತು ಸಾವಿರಕ್ಕೂ ಹೆಚ್ಚು ಮತ ಡಿಲೀಟ್ ಆಗಿದೆ. ಇದು ಪಕ್ಷದ ಮಟ್ಟದಲ್ಲಿ ಚರ್ಚೆ ಆಗ್ತಿರುವುದರಿಂದ ನಾನೇ ಸ್ಪಷ್ಟೀಕರಣ ಮಾಡಲು ಮುಂದೆ ಬಂದೆ. ಹೈಕಮಾಂಡ್ಗೆ ರಿಪೋರ್ಟ್ ಕೊಟ್ಟ ಬಗ್ಗೆ ಮಾಹಿತಿ ಇಲ್ಲ, ನನ್ನ ಹೇಳಿಕೆ ಆ ಅರ್ಥದಲ್ಲಿ ಇರಲಿಲ್ಲ. ಹೀಗಾಗಿ ನಾನು ಕ್ಲಾರಿಫಿಕೇಷನ್ ಕೊಟ್ಟಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ರಾಯಚೂರಿನ ಸಾಹಿತ್ಯ, ಜಾನಪದ ಕ್ಷೇತ್ರದ ಇಬ್ಬರು ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ನನ್ನ ಮೊದಲ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಡಿ ಅಂತ ಪಕ್ಷ ಆಗಲಿ, ಯಾರೇ ಆಗಲಿ ನನ್ನ ಮೇಲೆ ಒತ್ತಡ ತಂದಿಲ್ಲ. ಯಾವುದೇ ಒತ್ತಡಕ್ಕೆ ಮಣಿದು ನಾನು ಸ್ಪಷ್ಟನೆ ಕೊಟ್ಟಿಲ್ಲ. ಕೆಪಿಸಿಸಿ ಅಥವಾ ಎಐಸಿಸಿಯಿಂದ ನನಗೆ ಒತ್ತಡ ಇರಲಿಲ್ಲ. ನನ್ನ ಹೇಳಿಕೆ ಬಳಿಕ ನಮ್ಮ ಪಕ್ಷದ ಶಾಸಕರು ನನ್ನ ಗಮನಕ್ಕೆ ಹಲವು ವಿಚಾರ ತಂದಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಸರಿ ಆಗಿರಬಹುದು, ಆದರೆ ನಮ್ಮಲ್ಲಿ ತಪ್ಪಾಗಿದೆ ಎಂದಿದ್ದಾರೆ. ಹೀಗಾಗಿ ನಾನು ನನ್ನ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಕೆಲವು ಕಡೆ ಸಮಸ್ಯೆ ಆಗಿರುವುದರಿಂದ ನನ್ನ ಹೇಳಿಕೆಯಿಂದ ಸ್ವಲ್ಪ ಗೊಂದಲ ಆಗಿರಬಹುದು ಇನ್ನಷ್ಟು ಮಾಹಿತಿ ತಿಳಿದುಕೊಂಡು ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದಾರೆ.
ಇತ್ತ ಸತೀಶ್ ಜಾರಕಿಹೊಳಿ ಕೊಟ್ಟ ಹೇಳಿಕೆಯನ್ನೇ ಬಿಜೆಪಿ (BJP) ಅಸ್ತ್ರವಾಗಿಸಿಕೊಂಡಿದೆ. ಎಸ್ಐಆರ್ ಫಸ್ಟ್ ಕ್ಲಾಸ್ ಆಗಿದೆ ಅಂತ ಕಾಂಗ್ರೆಸ್ ಸಚಿವರೇ ಹೇಳಿಕೆ ಕೊಡ್ತಾರೆ. ಇನ್ಯಾವ ಮುಖ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತೀರಾ ಎಂದು ವಿಪಕ್ಷ ನಾಯಕ ಅಶೋಕ್ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ, ಎಲ್ಲರಿಗೂ ಎಸ್ಐಆರ್ ಸರಿಯಾಗಿದೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಸರಿ ಕಾಣುತ್ತಿಲ್ಲ. ಜಾರಕಿಹೊಳಿ ಸ್ಥಾನಕ್ಕೆ ಗಂಡಾಂತರ ಬರಬಹುದು ಅಂತ ಸುನೀಲ್ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
