ರಾಯಚೂರು: ಬಿಸಿಲನಾಡು ರಾಯಚೂರಿನ (Raichuru) ಇಬ್ಬರು ಸಾಧಕರು 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ವೀರ ಹನುಮಾನ್, ಜಾನಪದ ಕ್ಷೇತ್ರದಲ್ಲಿ ಈರಣ್ಣ ರುದ್ರಾಕ್ಷಿಗೆ ಪ್ರಶಸ್ತಿ ಒಲಿದು ಬಂದಿದೆ.
ದೇವದುರ್ಗದ ಅಲೆಮಾರಿ ಸಮುದಾಯದ ಈರಣ್ಣ ರುದ್ರಾಕ್ಷಿಯ 50 ವರ್ಷಗಳ ಸೇವೆಗೆ ಪ್ರಶಸ್ತಿ ಸಿಕ್ಕಿದೆ. ಹಗಲು ವೇಷಗಾರಿಕೆ ಹಾಗೂ ಜಾನಪದ ರಂಗಭೂಮಿ ಸೇವೆ, ಗುರುತಿಸಿ ಸರ್ಕಾರ ಗೌರವಿಸುತ್ತಿದೆ. ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿ ರಾಯಚೂರು ನಗರದ ವೀರ ಹನುಮಾನ್ಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಿಕ್ಕಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಸುಮಾರು 50 ಕೃತಿಗಳನ್ನ ರಚಿಸಿರುವ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ವೀರಹನುಮಾನ ಕನ್ನಡ ಸಾಹಿತ್ಯ ಲೋಕಕ್ಕೆ ಹೈಕುಗಳನ್ನ (ಮೂರು ಸಾಲಿನ ಸಣ್ಣ ಕ್ಯಾವಪ್ರಕಾರ) ಪರಿಚಯಿಸಿದ ಸಾಹಿತಿಯಾಗಿದ್ದಾರೆ. ಕನ್ನಡ ಹೈಕುಗಳ ಸಂಕಲನ ಮೂಲಕ ಕನ್ನಡ ಸಾಹಿತ್ಯಕ್ಕೆ ಮೆರಗು ತಂದಿದ್ದಾರೆ. ಸುಮಾರು 40 ವರ್ಷಗಳ ಇವರ ಸಾಹಿತ್ಯ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
