– ಪೊಲೀಸರೂ ರಿಯಾಲಿಟಿ ಮುಚ್ಚಿ ಹಾಕ್ತಿದ್ದಾರೆ
ಬೆಂಗಳೂರು: ಸಿದ್ರಾಮಯ್ಯ ಸ್ಟಿಂಗ್ ಆಪರೇಷನ್ ಕೇಸನ್ನ ಮುಚ್ಚಹಾಕಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಹೇಳಿದೆ. ಅದರಂತೆ ಕೇಸ್ ಮುಚ್ಚಿಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಕೇಸಲ್ಲಿ ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಇದನ್ನ ಮುಚ್ಚಿ ಹಾಕಿ ಅಂತಾ ಹೇಳಿದ್ದಾರೆ. ಅದರಂತೆ ಮುಚ್ಚಿಹಾಕ್ತಿದ್ದಾರೆ, ಪೊಲೀಸರು ಕೂಡ ರಿಯಾಲಿಟಿ ಮುಚ್ಚಿಹಾಕ್ತಿದ್ದಾರೆ. 2012ರಲ್ಲಿ ಮಾಡಿದ ವಿಡಿಯೋ ಅಂತ ಹರಿಪ್ರಸಾದ್ ಹೇಳಿದ್ರು, ಸಿಡಿ ಇರೋದಕ್ಕೆನೇ ಸಿದ್ದರಾಮಯ್ಯ ಸ್ಟೇ ತಂದಿದ್ದಾರೆ ಅಂತ ರಾಜಣ್ಣ ಕೂಡ ಹೇಳಿದ್ರು. 100% ಇದು ಸಿದ್ದರಾಮಯ್ಯ ಅವರನ್ನ ಕೆಳಗಿಳಿಸೋದಕ್ಕೆ ಮಾಡಿದ ಹುನ್ನಾರ, ಇಳಿಸಿ ಆಯಿತು. ಈಗ 4 ರಾಜ್ಯಗಳ ಎಂಎಲ್ಸಿ ಚುನಾವಣೆಯಲ್ಲಿ ಸೋತಿದ್ದಾರಲ್ಲ, ಮರ್ಯಾದೆ ಹೋಗಿದೆ. ಅದರಿಂದ ತಪ್ಪಿಸಿಕೊಳ್ಳಲು ಕೇಸ್ ಮುಚ್ಚಿಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ರೈತರಿಗೆ ಹಾಲಿನ ಸಬ್ಸಿಡಿ 7 ರುಪಾಯಿ ಕೊಡ್ತೀನಿ ಅಂತ ಸರ್ಕಾರ ಹೇಳಿತ್ತು. ಈಗ ಅದನ್ನ ಜನರ ತಲೆಗೆ ಕಟ್ಟುವ ಕೆಲಸ ಮಾಡಿದೆ. ನಾನು ಮೊದಲೇ ಹೇಳಿದ್ದೆ, ಸರ್ಕಾರ ಪಾಪರ್ ಆಗಿದೆ ಅಂತ. ಕಾಫಿ ಟೀ ರೇಟ್ ಕೂಡ ಜಾಸ್ತಿ ಆಗುತ್ತೆ. ನೀವು ಪಾಪರ್ ಆಗಿದ್ದರೆ ಜನರ ಮುಂದೆ ಹೇಳಿಬಿಡಿ. ಬಸ್ ಗಳಿಗೆ ಡೀಸೆಲ್ ಅಲ್ಲ, ಅವುಗಳಿಗೆ ಬ್ಯಾಟರಿ ಕೂಡ ಇಲ್ಲ. ಸಿದ್ದರಾಮಯ್ಯ 1 ಸುತ್ತು ಬೆಲೆ ಏರಿಕೆ ಮಾಡಿದ್ದರು, ಇವರು ಎರಡನೇ ಸುತ್ತು ಬೆಲೆ ಏರಿಕೆ ಮಾಡಿದ್ದಾರೆ. ನೀವು ಸಬ್ಸಿಡಿ ಕೊಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಯಾಕೆ ಮಾತು ಕೊಟ್ರಿ. ನೀರಿನ ಬೆಲೆ ಎಷ್ಟು, ಹಾಲಿನ ಬೆಲೆ ಹೋಲಿಕೆ ಮಾಡ್ತೀರಾ? ನಾಚಿಕೆ ಆಗಬೇಕು ನಿಮಗೆ, ಸಿಎಂ ಫೈವ್ ಸ್ಟಾರ್ ಹೋಟೆಲ್ ನಲ್ಲಿ 35 ರೂ. ಕೊಟ್ಟು ನೀರು ಕುಡಿದಿರಬೇಕು. ಜನ 5 ರುಪಾಯಿ ಹಾಕಿ 20 ಲೀಟರ್ ನೀರು ಹಿಡಿತಾರೆ ಎಂದು ತಿವಿದಿದ್ದಾರೆ.
