– ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಭ್ರೂಣ ಹೊರ ತೆಗೆದ ವೈದ್ಯರು
ಬಳ್ಳಾರಿ: ಎರಡು ತಿಂಗಳ ಮಗು ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಭ್ರೂಣವನ್ನು ಹೊರತೆಗೆದಿರುವ ಘಟನೆ ಬಳ್ಳಾರಿಯ ವಿಮ್ಸ್ (balari VIMS ) ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಖಾಸಗಿ ಆಸ್ಪತ್ರೆಯಿಂದ ವಿಮ್ಸ್ಗೆ ಮಗುವನ್ನು ಉನ್ನತ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಕೊನೆಗೂ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವಿಮ್ಸ್ ಆಸ್ಪತ್ರೆಯ ವೈದ್ಯರು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರ ತೆಗೆದಿದ್ದಾರೆ. ವೈದ್ಯ ಲೋಕದಲ್ಲಿ ಇದೊಂದು ವಿಚಿತ್ರ ಪ್ರಕರಣ ಎನ್ನಲಾಗಿತ್ತು. ಇದನ್ನೂ ಓದಿ: ದಾಂಡೇಲಿ ಕಾಳಿ ನದಿಯಲ್ಲಿ ಏರಿಕೆ ಕಂಡ ಮೊಸಳೆಗಳು; ಜಲಸಾಹಸ ಕ್ರೀಡೆಗೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ
ಇದನ್ನ ಫೀಟಸ್ ಇನ್ ಫೀಟು(Fetus in Fetu) ಪತ್ತೆ ಎಂದು ವೈದ್ಯರು ಗುರುತಿಸಿದ್ದರು. ಇದೀಗ ವಿಮ್ಸ್ನ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ಗಡ್ಡಿ ದಿವಾಕರ್ ನೇತೃತ್ವದಲ್ಲಿ ಯಶಸ್ವಿ ಚಿಕಿತ್ಸೆ ನಡೆಸುವ ಮೂಲಕ, ವೈದ್ಯರು ಮಗುವಿಗೆ ಪುನರ್ಜನ್ಮ ನೀಡಿದ್ದಾರೆ. ವೈದ್ಯಕೀಯ ವಿಜ್ಞಾನದ ಅನ್ವಯ ತಾಯಿ ಗರ್ಭದಲ್ಲಿ ಅವಳಿ ಭ್ರೂಣ ಪತ್ತೆಯಾಗಿದ್ದು, ಮಗುವಿನ ದೇಹದೊಳಗೆ ಮತ್ತೊಂದು ಭ್ರೂಣ ಸೇರಿಕೊಂಡಿತ್ತು. ಈ ಫೀಟಸ್ ಇನ್ ಫೀಟು ಪ್ರಕರಣ ಜನಿಸಿದ 5 ಲಕ್ಷ ಮಕ್ಕಳ ಪೈಕಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತೆ ಎನ್ನಲಾಗಿದೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿ ವಿರುದ್ಧ ಚಾಲಕರ ಆಕ್ರೋಶ – ಮಡಿಕೇರಿಯಲ್ಲಿ ನಾಳೆ ಆಟೋ ಸಂಚಾರ ಬಂದ್!
