– ಹಿಂಸಾಚಾರ, ಅಶ್ರುವಾಯು, ಸಾಮೂಹಿಕ ಬಂಧನ
– ಯುರೋಪ್ನಾದ್ಯಂತ ಭುಗಿಲೆದ್ದ ಬೃಹತ್ ಪ್ರತಿಭಟನೆ
ಪ್ಯಾರಿಸ್/ಮ್ಯಾಡ್ರಿಡ್/ರೋಮ್/ಲಿಸ್ಬನ್: ಪ್ಯಾರಿಸ್, ತಿರಾನಾದಿಂದ ಹಿಡಿದು ಮ್ಯಾಡ್ರಿಡ್, ರೋಮ್ ಹಾಗೂ ಲಿಸ್ಬನ್ವರೆಗೆ ಇಡೀ ಯುರೋಪ್(Europe) ಖಂಡದಲ್ಲಿ ಭಾರಿ ಪ್ರತಿಭಟನೆಯ(Protest) ಅಲೆ ಎದ್ದಿದೆ.
ದಿನೇದಿನೆ ಏರುತ್ತಿರುವ ಜೀವನ ವೆಚ್ಚ, ಗಗನಕ್ಕೇರುತ್ತಿರುವ ವಸತಿ ಮತ್ತು ಬಾಡಿಗೆ ದರಗಳು ಹಾಗೂ ಸರ್ಕಾರದ ನೀತಿಗಳ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆಗಳು ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹೆಣಗಾಡುತ್ತಿವೆ.
ಫ್ರಾನ್ಸ್
ಶನಿವಾರ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ವೇಳೆ ಪೊಲೀಸರು ಸುಮಾರು 1,000 ಜನರನ್ನು ಬಂಧಿಸಿದ್ದಾರೆ. ಕಪ್ಪು ಬಟ್ಟೆ ಧರಿಸಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿ, ಪಟಾಕಿ ಸಿಡಿಸಿ ಪ್ರಚೋದನೆ ನೀಡಿದ್ದಾರೆ.
WATCH: Large crowds marched through Paris today in a second national day of protests against the rising cost of living, as authorities deployed heavy security following last weekend’s riots.
The police prefecture put turnout in Paris at about 110,000, while the CGT union claimed around 250,000.
Nationwide, the Interior Ministry counted roughly 410,000 protesters, compared with up to 800,000 claimed by the CGT. https://t.co/zaogkGKwyY
— Clash Report (@clashreport) October 24, 2026
ಸರ್ಕಾರದ ಪ್ರಕಾರ ದೇಶಾದ್ಯಂತ 4,10,000 ಜನರು ಭಾಗವಹಿಸಿದ್ದು, ಪ್ಯಾರಿಸ್ನಲ್ಲೇ 1,10,000 ಜನರಿದ್ದರು. ಆದರೆ ಪ್ರತಿಭಟನೆಯ ಆಯೋಜಕ ಸಂಸ್ಥೆ ಸಿಜಿಟಿ (CGT) ಯೂನಿಯನ್, ದೇಶಾದ್ಯಂತ 8,00,000 ಮತ್ತು ಪ್ಯಾರಿಸ್ನಲ್ಲಿ 2,50,000 ಜನರು ಬೀದಿಗಿಳಿದಿದ್ದರು ಎಂದು ಹೇಳಿದೆ.
ಪ್ಯಾರಿಸ್, ಲಿಯಾನ್, ಲಿಲ್ಲೆ, ಮಾರ್ಸೇಲ್, ಮಾಂಟ್ಪೆಲ್ಲಿಯರ್, ನಾಂಟೆಸ್ ಮತ್ತು ಟೌಲೌಸ್ಗಳಲ್ಲಿ ಘರ್ಷಣೆಗಳು ವರದಿಯಾಗಿವೆ. ಪ್ಯಾರಿಸ್ ಒಂದರಲ್ಲೇ 3,000ಕ್ಕೂ ಹೆಚ್ಚು ಜನರನ್ನು ತಪಾಸಣೆಗೊಳಪಡಿಸಿ, 65 ಜನರನ್ನು ಬಂಧಿಸಲಾಗಿದೆ.
ಫ್ರೆಂಚ್ ಎಡಪಂಥೀಯ ನಾಯಕ ಜೀನ್-ಲುಕ್ ಮೆಲೆಂಕೋನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು, “ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಹಾಗೂ ಮಾಧ್ಯಮಗಳಲ್ಲಿ ಜನರ ಚಳವಳಿಯನ್ನು ಕೆಟ್ಟದಾಗಿ ಬಿಂಬಿಸಲು ಪೊಲೀಸರು ಹಿಂಭಾಗದಲ್ಲಿದ್ದ ಜನರ ಮೇಲೆ ಅಶ್ರುವಾಯು ಸಿಡಿಸಿ ದಾಳಿ ನಡೆಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಬೇನಿಯಾ
ಅಲ್ಬೇನಿಯಾದ ರಾಜಧಾನಿ ತಿರಾನಾದಲ್ಲಿ ಭ್ರಷ್ಟಾಚಾರ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಸಾವಿರಾರು ಜನರು ಪ್ರತಿಭಟನೆ ಮುಂದುವರಿಸಿದ್ದಾರೆ. ಜನಸಂದಣಿಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್ಗಳನ್ನು ಬಳಸಿದ್ದರೆ, ಪ್ರತಿಭಟನಾಕಾರರು ಪಟಾಕಿಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ.
MORE from Albania: Protesters unleash very intense barrages of fireworks at police in Tirana’s Skanderbeg Square. https://t.co/qrgYRxCjZ7
— Clash Report (@clashreport) October 24, 2026
ಮೇ ತಿಂಗಳಲ್ಲಿ ಆರಂಭವಾದ ಈ ಪ್ರತಿಭಟನೆಯು ಟ್ರಂಪ್ ಕುಟುಂಬಕ್ಕೆ ಸಂಬಂಧಿಸಿದ ಐಷಾರಾಮಿ ಹೋಟೆಲ್ ಯೋಜನೆಗೆ ನೀಡಲಾದ ಅನುಮೋದನೆಯಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಲ್ಬೇನಿಯಾದ ಕರಾವಳಿ ಭಾಗದ ಪ್ರಾಕೃತಿಕ ತಾಣಕ್ಕೆ ಈ ಯೋಜನೆಯಿಂದ ಸರಿಪಡಿಸಲಾಗದ ಹಾನಿಯಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅಕ್ಟೋಬರ್ ಮಧ್ಯದಿಂದೀಚೆಗೆ ನಡೆದ ಘರ್ಷಣೆಗಳಲ್ಲಿ 300ಕ್ಕೂ ಹೆಚ್ಚು ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡಿದ್ದು, ಹಲವು ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆದಿವೆ.
ಇಟಲಿ:
ಇಟಲಿಯಲ್ಲಿ ವಿದ್ಯಾರ್ಥಿಗಳು, ಲಾರಿ ಚಾಲಕರು ಹಾಗೂ ರೈತರು ಜೀವನ ವೆಚ್ಚ, ಇಂಧನ ಬೆಲೆ ಮತ್ತು ವಸತಿ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸರ್ಕಾರ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿತ್ತು.
ITALY POLICE DRENCH ANTI-GOVERNMENT PROTESTERS with WATER CANNONS in ROME https://t.co/wRL92CDATD
— RT (@RT_com) October 24, 2026
8 ನಗರಗಳಲ್ಲಿ ನಡೆದ ಘರ್ಷಣೆಗಳ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದು, 110 ಅಪ್ರಾಪ್ತರು ಸೇರಿದಂತೆ 371 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಪ್ರಧಾನಿ ಮೆಲೋನಿ, ಹಿಂಸಾಚಾರ ಎಸಗಲು ಯತ್ನಿಸಿದವರ ವಿರುದ್ಧ ಸಾರ್ವಜನಿಕರ ರಕ್ಷಣೆ ಹಾಗೂ ಶಾಂತಿಯುತ ಪ್ರತಿಭಟನಾ ಹಕ್ಕನ್ನು ಕಾಪಾಡಿದ ಭದ್ರತಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸ್ಪೇನ್
ಸ್ಪೇನ್ನ ಮ್ಯಾಡ್ರಿಡ್ನಲ್ಲಿರುವ ‘ಪೋರ್ಟಾ ಡೆಲ್ ಸೋಲ್’ ಚೌಕದಲ್ಲಿ ವಸತಿ ಬಿಕ್ಕಟ್ಟಿನ ವಿರುದ್ಧ ಬೃಹತ್ ಪ್ರತಿಭಟನಾ ಶಿಬಿರ ತಲೆಯೆತ್ತಿದೆ. ನೂರಾರು ಜನರು ಇಲ್ಲಿ ಟೆಂಟ್ಗಳನ್ನು ಹಾಕಿಕೊಂಡು ನೆಲೆಸಿದ್ದು, ಕ್ಯಾಂಟೀನ್ ಮತ್ತು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.
ITALY POLICE DRENCH ANTI-GOVERNMENT PROTESTERS with WATER CANNONS in ROME https://t.co/wRL92CDATD
— RT (@RT_com) October 24, 2026
ಸೆಪ್ಟೆಂಬರ್ 26 ರಂದು ಮಾಲೀಕರು ವಿಪರೀತ ಬಾಡಿಗೆ ಹೆಚ್ಚಿಸಿದ ಕಾರಣದಿಂದಾಗಿ, 87 ವರ್ಷದ ಹಿರಿಯ ಪಿಂಚಣಿದಾರ ಮಹಿಳೆಯನ್ನು ಮನೆಯಿಂದ ಹೊರಹಾಕಲಾಯಿತು. ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಬಾಡಿಗೆ ನಿಯಂತ್ರಣ ಮತ್ತು ಬಾಡಿಗೆದಾರರ ಹಕ್ಕುಗಳ ರಕ್ಷಣೆಗೆ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಸರ್ಕಾರ ತುರ್ತು ಮಸೂದೆ ತಂದರೂ ಸಂಸತ್ತಿನಲ್ಲಿ ಅಂಗೀಕಾರ ಸಿಗದ ಕಾರಣ, ನವೆಂಬರ್ 29 ಕ್ಕೆ ಮಧ್ಯಂತರ ಸಾರ್ವತ್ರಿಕ ಚುನಾವಣೆ ಘೋಷಿಸಲಾಗಿದೆ.
ಪೋರ್ಚುಗಲ್
ಯುರೋಪ್ನಲ್ಲೇ ಅತ್ಯಂತ ಭೀಕರ ವಸತಿ ಸಮಸ್ಯೆಯನ್ನು ಪೋರ್ಚುಗಲ್ ಎದುರಿಸುತ್ತಿದೆ. 2017 ರಿಂದ ಇಲ್ಲಿ ಮನೆಯ ಬೆಲೆಗಳು ದುಪ್ಪಟ್ಟಾಗಿದ್ದರೆ, ಹೊಸ ಗುತ್ತಿಗೆಗಳ ಬಾಡಿಗೆ ದರಗಳು ಗಗನಕ್ಕೇರಿವೆ. ಇದರಿಂದ ಯುವಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಿಸ್ಬನ್ನ ರೋಸಿಯೊ ಚೌಕದಲ್ಲಿ ಪ್ರತಿಭಟನಾಕಾರರು ಹಾಕಿದ್ದ 100ಕ್ಕೂ ಹೆಚ್ಚು ಟೆಂಟ್ಗಳನ್ನು ಪೊಲೀಸರು ಭಾನುವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಶ್ವಾನದಳದೊಂದಿಗೆ ತೆರವುಗೊಳಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಹಲವರನ್ನು ಬಂಧಿಸಲಾಗಿದೆ. ಬಾಡಿಗೆ ಮಿತಿಯನ್ನು ರದ್ದುಪಡಿಸುವ ಮತ್ತು ಜನರನ್ನು ಸುಲಭವಾಗಿ ಮನೆಯಿಂದ ಹೊರಹಾಕಲು ಅನುವು ಮಾಡಿಕೊಡುವ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕೆಂದು ನಾಗರಿಕರು ಪಟ್ಟುಹಿಡಿದಿದ್ದಾರೆ.
