– ಹಣಕಾಸಿನ ವಿಚಾರಕ್ಕೆ ಧನ್ವೀರ್-ವಿಜಯಲಕ್ಷ್ಮಿ ನಡುವೆ ಮನಸ್ತಾಪ?
ಹಣಕಾಸಿನ ವಿಚಾರಕ್ಕೆ ನಟ ಧನ್ವೀರ್ (Dhanveer) ಮತ್ತು ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ ಅವರ ಮಧ್ಯೆ ಮನಸ್ತಾಪ ಆಗಿದೆ ಎನ್ನಲಾಗಿದೆ. ಜೈಲಿಗೆ ಭೇಟಿ ನೀಡಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಹೇಳಿದಾಗ, ಧನ್ವೀರ್ ವಿರುದ್ಧ ದರ್ಶನ್ ಸಿಟ್ಟು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ‘ನಮ್ ಜೊತೆ ಇದ್ದವ್ರೇ ಮುಳ್ಳಾಗ್ತಾರೆ’ ಎಂದು ಹೇಳಿ ವಿಜಯಲಕ್ಷ್ಮಿಗೆ ದರ್ಶನ್ ಸಮಾಧಾನ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯೇ ಹಣಕಾಸಿನ ವಿಚಾರದಲ್ಲಿ ವಿಜಯಲಕ್ಷ್ಮಿ-ಧನ್ವೀರ್ ನಡುವೆ ಮನಸ್ತಾಪ ಆಗಿತ್ತು. ಆಗ ವಿಜಯಲಕ್ಷ್ಮಿ, ಧನ್ವೀರ್, ಮಧ್ಯವರ್ತಿ ಮೂವರು ಜೈಲಿಗೆ ಹೋಗಿ ದರ್ಶನ್ ಭೇಟಿಯಾಗಿದ್ದರು. ಈ ವೇಳೆ ಮಧ್ಯವರ್ತಿ ವ್ಯಕ್ತಿಗೆ ಹಣ ಕೊಡಲು ಧನ್ವೀರ್ಗೆ ದರ್ಶನ್ ಸೂಚಿಸಿದ್ದರು. ಆದಾದ, ಬಳಿಕ ಹಣ ಕೊಡಲು ಧನ್ವೀರ್ ನಿರಾಕರಿಸಿದ್ದರು. ಇದನ್ನೂ ಓದಿ: ನಾನ್ ಪ್ರೂವ್ ಮಾಡೋಕೆ ರೆಡಿ, ಅವ್ರೂ ಬಂದು ಪ್ರೂವ್ ಮಾಡಲಿ – ವಿಜಯಲಕ್ಷ್ಮಿಗೆ ಧನ್ವೀರ್ ಓಪನ್ ಚಾಲೆಂಜ್
ಇದೇ ವಿಚಾರಕ್ಕೆ ವಿಜಯಲಕ್ಷ್ಮಿ, ಧನ್ವೀರ್ಗೆ ಕರೆ ಮಾಡಿದ್ರೂ ಕಾಲ್ ಪಿಕ್ ಮಾಡ್ತಿರಲಿಲ್ಲ. ಆಗ ಧನ್ವೀರ್ ತಂದೆಗೆ ಕರೆ ಮಾಡುತ್ತಿದ್ದರು. ಧನ್ವೀರ್ ತಂದೆಯೂ ವಿಜಯಲಕ್ಷ್ಮಿ ಕಾಲ್ ಪಿಕ್ ಮಾಡದಿದ್ದಾಗ, ಧನ್ವೀರ್ ತಂದೆಗೆ ಮನೆಗೆ ಬರ್ತಿದ್ದೇನೆ ಅಂಕಲ್ ಅಂತ ಮೆಸೇಜ್ ಮಾಡಿ, ದಸರಾ ಹಬ್ಬದ ದಿನ ಮನೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಧನ್ವೀರ್ ಇರಲಿಲ್ಲ. ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದೆ ಎನ್ನಲಾಗಿದೆ.
ಅಣ್ಣ (ದರ್ಶನ್) ಹಣ ಕೊಡಲು ಸೂಚಿಸಿದ್ರೂ ಹಣ ಕೊಡದೇ ಧನ್ವೀರ್ ಸತಾಯಿಸಿದ್ದರು. ಹಣಕಾಸಿನ ವಿಚಾರವೊಂದರಲ್ಲಿ ಧನ್ವೀರ್ರಿಂದ ಹಣ ಬರಬೇಕಿತ್ತು. ಈ ಹಣವನ್ನ ವಿಜಯಲಕ್ಷ್ಮಿ ಕೇಳಿದಾಗ, ಅಣ್ಣ ಹೇಳಿದ್ರೆ ಕೊಡ್ತೀನಿ ಅಂತ ಧನ್ವೀರ್ ಹೇಳಿದ್ದರು. ಮಧ್ಯವರ್ತಿ, ಧನ್ವೀರ್ ಜೊತೆ ದರ್ಶನ್ರನ್ನ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಈ ವೇಳೆ ಮಧ್ಯವರ್ತಿ ಮೂಲಕ ವಿಜಯಲಕ್ಷ್ಮಿಗೆ ಹಣ ಕೊಡಲು ದರ್ಶನ್ ಹೇಳಿದ್ದರು. ಹಣ ಕೊಡ್ತೀನಿ ಅಂತ ಧನ್ವೀರ್ ಆಗ ಒಪ್ಪಿಕೊಂಡಿದ್ದರು. ಆದಾದ ಬಳಿಕ ಎರಡು ತಿಂಗಳು ಕಳೆದ್ರೂ ಹಣ ಕೊಟ್ಟಿರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿಜಯಲಕ್ಷ್ಮಿ Vs ಧನ್ವೀರ್ – ದರ್ಶನ್ಗೆ ಶುರುವಾಯ್ತಾ ಹೊಸ ಸಂಕಷ್ಟ?
