ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಇದೀಗ ಹೊಸ ವಿವಾದವೊಂದು ಭುಗಿಲೆದ್ದಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ (Farooq Abdullah) ಅವರ ಹೇಳಿಕೆಗಳನ್ನು `ಪಾಕಿಸ್ತಾನ ಪರ’ ಮತ್ತು `ದೇಶದ್ರೋಹ’ ಎಂದು ಆರೋಪಿಸಿರುವ ಬಿಜೆಪಿ (BJP) ತೀವ್ರವಾಗಿ ಖಂಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, ಕಾಶ್ಮೀರಿಗಳ ವಿಚಾರದಲ್ಲಿ ಭಾರತ ಸರ್ಕಾರದ ಉದ್ದೇಶಗಳು ಸರಿಯಾಗಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳಿಂದಲೇ ಕಾಶ್ಮೀರಿಗಳ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿಸುತ್ತಿದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್, ಹಿರಿಯ ಕಾಶ್ಮೀರಿ ನಾಯಕ ಅಬ್ದುಲ್ಲಾ ಅವರು ಗಡಿಯಾಚೆಗಿನ ಪರಿಸ್ಥಿತಿಯನ್ನೂ ಗಮನಿಸಿ ಅಲ್ಲಿನ ಕಾಶ್ಮೀರಿಗಳ ದುಸ್ಥಿತಿಯನ್ನು ನೋಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: Exclusive | ಮಾಫಿ ಸಾಕ್ಷಿ ಹಿಂದೆ ವಿಜಯಲಕ್ಷ್ಮಿ ಕೈವಾಡ? – ʻಪಬ್ಲಿಕ್ ಟಿವಿʼಗೆ ಧನ್ವೀರ್ ಸ್ಫೋಟಕ ಹೇಳಿಕೆ
ಕಾಶ್ಮೀರ ಆರ್ಥಿಕವಾಗಿ ಸದೃಢವಾಗಿದೆ:
ಈ ಕುರಿತು ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಆರ್.ಪಿ.ಸಿಂಗ್, 370ನೇ ವಿಧಿ ರದ್ದುಗೊಳಿಸಿ ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದೊಂದಿಗೆ ಏಕೀಕರಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಈ ಹಿಂದೆಂದಿಗಿಂತಲೂ ಕಾಶ್ಮೀರ ಈಗ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: 100 ವರ್ಷಗಳಿಂದ ಬೆಳೆಯುತ್ತಿರೋ RSSಗೆ ಅಡ್ಡಿ ಬರೋದು ಮೂರ್ಖತನ: ಮುತಾಲಿಕ್
ಇನ್ನು ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯೆ ಯಾಮಿನಿ ಶರ್ಮಾ ಅವರು, ಫಾರೂಖ್ ಅಬ್ದುಲ್ಲಾ ಪಾಕಿಸ್ತಾನದ ನಿಲುವನ್ನೇ ಪ್ರತಿಧ್ವನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುರಿತು ಅಬ್ದುಲ್ಲಾ ನೀಡಿರುವ ಹೇಳಿಕೆ ಭಾರತೀಯ ಸಂವಿಧಾನಕ್ಕೆ ಹಾಗೂ ಅಲ್ಲಿನ ದೇಶಭಕ್ತ ಜನರಿಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಹೇಳಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಕಣಿವೆಯಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಪಾಕಿಸ್ತಾನದ ವಕ್ತಾರನಂತೆ ವರ್ತಿಸುತ್ತಿದೆ ಎಂದು ಯಾಮಿನಿ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exclusive | ನಾನು ನೆಪಮಾತ್ರ ದರ್ಶನ್ ನಿಜವಾದ ಟಾರ್ಗೆಟ್ – ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಹೊಸ ಬಾಂಬ್
ಕ್ಷಮೆಯಾಚಿಸಲು ಆಗ್ರಹ:
ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯನ್ನು `ಭಾರತ ವಿರೋಧಿ’ ಮತ್ತು `ಪಾಕಿಸ್ತಾನ ಪರ’ ಎಂದು ಖಂಡಿಸಿರುವ ಬಿಜೆಪಿ ಶಾಸಕ ಯುಧ್ವೀರ್ ಸೇಥಿ, ಇದು ದೇಶದ್ರೋಹಕ್ಕೆ ಸಮಾನವಾಗಿದೆ ಎಂದು ಹೇಳಿದ್ದಾರೆ. ದೇಶದ ವಿರುದ್ಧ ಮಾತನಾಡುವವರು ದೇಶದ್ರೋಹದ ಪ್ರಕರಣ ಎದುರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಅಮಿತ್ ಶಾ ಭೇಟಿ – ಕಾನೂನು ಸುವ್ಯವಸ್ಥೆ ಪರಿಶೀಲನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ರಕ್ತಪಾತಕ್ಕೆ ಪಾಕಿಸ್ತಾನವೇ ಕಾರಣ ಎಂಬುದು ಜಗತ್ತಿಗೆ ತಿಳಿದಿದೆ. ಹೀಗಾಗಿ, ಪಾಕಿಸ್ತಾನದ ಪರವಾಗಿ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಇದಕ್ಕಾಗಿ ಫಾರೂಖ್ ಅಬ್ದುಲ್ಲಾ ಕ್ಷಮೆಯಾಚಿಸಬೇಕು ಎಂದು ಯುಧ್ವೀರ್ ಸೇಥಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಅವಘಡದಲ್ಲಿ ಹಾನಿಯಾಗಿದ್ದ ಅಂಬಾರಿ, ವಿಗ್ರಹವನ್ನು ಪರಿಶೀಲಿಸಿದ ಸಚಿವ ಮಧು ಬಂಗಾರಪ್ಪ
ಫಾರೂಕ್ ಅಬ್ದುಲ್ಲಾ ಹೇಳಿಕೆ ಏನು?
ಶನಿವಾರ ಮಾತನಾಡಿದ್ದ ಫಾರೂಕ್ ಅಬ್ದುಲ್ಲಾ, ಕಾಶ್ಮೀರಿಗಳ ವಿಚಾರದಲ್ಲಿ ಭಾರತ ಸರ್ಕಾರದ ಉದ್ದೇಶಗಳು ಸರಿಯಾಗಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿಯೇ ಕಾಶ್ಮೀರಿಗಳ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದರು. ಇದನ್ನೂ ಓದಿ: ಗುಂಡಿನ ದಾಳಿ ಘಟನೆ ಬೆನ್ನಲ್ಲೇ 9 ಕೋಟಿಗೆ ಮುಂಬೈ ಫ್ಲಾಟ್ ಸೇಲ್ ಮಾಡಿದ ಟೈಗರ್ ಶ್ರಾಫ್!
ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನವು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರಿಗಳ ವಿಚಾರವನ್ನು ಪ್ರಸ್ತಾಪಿಸುತ್ತಿರುವುದರಿಂದಲೇ ಜಮ್ಮು ಮತ್ತು ಕಾಶ್ಮೀರದ ಜನರು ರಕ್ಷಿಸಲ್ಪಡುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ರಾಜಕೀಯ ಗುರು: ಶಿವಲಿಂಗೇಗೌಡ
ಪಾಕಿಸ್ತಾನವು ಹಲವು ಕಡೆಗಳಲ್ಲಿ ಕಾಶ್ಮೀರಿಗಳ ಬಗ್ಗೆ ಮಾತನಾಡುತ್ತಿದೆ. ಇದೇ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದ ಜನರು ರಕ್ಷಿಸಲ್ಪಡುತ್ತಿದ್ದಾರೆ. ಇಲ್ಲದಿದ್ದರೆ, ಕಾಶ್ಮೀರಿಗಳ ವಿಚಾರದಲ್ಲಿ ಭಾರತದ ಉದ್ದೇಶಗಳು ಸರಿಯಾಗಿಲ್ಲ ಎಂದು ಅವರು ಹೇಳಿದ್ದರು. ಈ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ: ಸ್ಮಶಾನದಿಂದ ಮೃತದೇಹ ತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ – ಮೂವರು ಆರೋಪಿಗಳು ವಶಕ್ಕೆ
