ಬಿಗ್ಬಾಸ್ ಮನೆಯಲ್ಲಿ ವಾರದ ಕ್ಯಾಪ್ಟೆನ್ಸಿ ಸ್ಪರ್ಧೆಗೆ ಇಬ್ಬರು ಮಹಿಳಾ ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ಶುರುವಾಗಿದೆ. ಸಾಮರ್ಥ್ಯ ಹಾಗೂ ಮೈಂಡ್ಗೇಮ್ ಆಧಾರಿತ ಸ್ಪರ್ಧೆಯಲ್ಲಿ ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಫಿರ್ದೋಸ್ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಟಾಸ್ಕ್ಗಳಲ್ಲಿ ನಿಪುಣರಾಗಿದ್ದು, ಇವರಲ್ಲಿ ಗೆಲ್ಲುವವರು ಯಾರು ಎಂಬ ನಿರೀಕ್ಷೆ ಹೆಚ್ಚಾಗಿದೆ.
ಆಸಿಯಾ Vs ಸೌಂದರ್ಯ; ಯಾರಾಗ್ತಾರೆ CAPTAIN!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/Vbv257FvCO
— Colors Kannada (@ColorsKannada) October 23, 2026
ಆಸಿಯಾ ಮತ್ತು ಸೌಂದರ್ಯ ಇಬ್ಬರಲ್ಲಿ ಯಾರೇ ಕ್ಯಾಪ್ಟನ್ ಆದರೂ ಈ ವಾರದ ನಾಮಿನೇಷನ್ನಿಂದ ಪಾರಾಗಲಿದ್ದಾರೆ. ಜೊತೆಗೆ, ಕ್ಯಾಪ್ಟನ್ ಹುದ್ದೆ ಅಲಂಕರಿಸಿದ ಖುಷಿಯೂ ಅವರದ್ದಾಗಲಿದೆ. ಈ ವಾರ ನಡೆದ ಲೂಟಿಕೋರರು ಮತ್ತು ರಕ್ಷಕರು ನಡುವಿನ ಟಾಸ್ಕ್ನಲ್ಲಿ ಲೂಟಿಕೋರರ ತಂಡದಲ್ಲಿದ್ದ ಆಸಿಯಾ, ಸೌಂದರ್ಯ, ತಾಂಡವ್ ಹಾಗೂ ಲಕ್ಷ್ಮಿ ಉತ್ತಮ ಪ್ರದರ್ಶನ ನೀಡಿದ್ದರು. ಗೆದ್ದ ಲೂಟಿಕೋರರ ತಂಡದಿಂದ ಆಸಿಯಾ ಮತ್ತು ಸೌಂದರ್ಯ ಕ್ಯಾಪ್ಟೆನ್ಸಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಇದೀಗ ಇಬ್ಬರಲ್ಲಿ ಯಾರೇ ಕ್ಯಾಪ್ಟನ್ ಆದರೂ ಸಮರ್ಥರೇ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಲೂಟಿಕೋರರು ಮತ್ತು ರಕ್ಷಕರು ನಡುವಿನ ಟಾಸ್ಕ್ನಲ್ಲಿ ಮ್ಯೂಸಿಯಂನಲ್ಲಿದ್ದ ಮೂರು ಅತ್ಯಮೂಲ್ಯ ವಸ್ತುಗಳನ್ನು ತಮ್ಮ ಜಾಣ್ಮೆಯಿಂದ ದೋಚುವಲ್ಲಿ ಆಸಿಯಾ, ತಾಂಡವ್, ಸೌಂದರ್ಯ ಹಾಗೂ ಲಕ್ಷ್ಮಿ ಯಶಸ್ವಿಯಾಗಿದ್ದರು. ಹೀಗಾಗಿ ಲೂಟಿಕೋರರ ತಂಡ ಗೆಲುವು ಸಾಧಿಸಿತ್ತು. ಈ ಗೆಲುವಿನ ಫಲವಾಗಿ ತಂಡದ ಸದಸ್ಯರು ಕ್ಯಾಪ್ಟೆನ್ಸಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮೊದಲ ಬಾರಿಗೆ ಸೌಂದರ್ಯ ಕ್ಯಾಪ್ಟನ್ ಆದರೆ ಅವರ ನಾಯಕತ್ವ ಹೇಗಿರಲಿದೆ? ಅಥವಾ ಆಸಿಯಾ ಕ್ಯಾಪ್ಟನ್ ಆಗಿ ಮನೆಯ ಎಲ್ಲ ಸದಸ್ಯರನ್ನು ಹೇಗೆ ಸಮತೋಲನದಿಂದ ನಿಭಾಯಿಸಲಿದ್ದಾರೆ? ಎಂಬ ಕುತೂಹಲ ಬಿಗ್ಬಾಸ್ ಅಭಿಮಾನಿಗಳಲ್ಲಿ ಮೂಡಿದೆ.


