ಬಿಗ್ಬಾಸ್ ಮನೆಯಲ್ಲಿ ಇಂದು ನಾಮಿನೇಷನ್ ಬಿಸಿ ಜೋರಾಗಲಿದೆ. ಸೌಂದರ್ಯ (Soundarya Shetty) ಹಾಗೂ ತಾಂಡವ್ (Tandav) ಸೇರಿ ಕ್ಯಾಪ್ಟನ್ ಗಗನ್ಗೆ ಸ್ನೇಹದ ಸವಾಲ್ ಹಾಕಿದಂತಾಗಿದೆ. ಒಂದೆಡೆ ಆತ್ಮೀಯ ಸ್ನೇಹ, ಇನ್ನೊಂದೆಡೆ ಆಟದ ಅನಿವಾರ್ಯತೆ, ಈ ಎರಡರ ನಡುವೆ ಸಿಲುಕಿರುವ ಗಗನ್, ತೀವ್ರ ಧರ್ಮಸಂಕಟಕ್ಕೆ ಒಳಗಾಗಿದ್ದಾರೆ.
ಹೌದು, ಬಿಗ್ಬಾಸ್ ಆರಂಭವಾದಾಗಿನಿಂದಲೂ ಗಗನ್ (Gagan) ಹಾಗೂ ತಾಂಡವ್ ಬೆಸ್ಟ್ ಫ್ರೆಂಡ್ಸ್. ಇನ್ನೂ ಕಳೆದ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಗನ್ ಹಾಗೂ ಸೌಂದರ್ಯ ಸೇರಿಕೊಂಡು ಒಬ್ಬರನ್ನೊಬ್ಬರು ಉಳಿಸಿಕೊಳ್ಳಲು ಒಳ್ಳೆಯ ಪ್ಲ್ಯಾನ್ ಮಾಡಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು. ಆದರೆ ಇದೀಗ ಗಗನ್ಗೆ ಸಂಕಷ್ಟ ಎದುರಾಗಿದ್ದು, ತಾಂಡವ್ ಅಥವಾ ಸೌಂದರ್ಯ ನಡುವೆ ಯಾರನ್ನು ನಾಮಿನೇಟ್ ಮಾಡ್ತಾರೆ ಎಂದು ಇಂದಿನ ಸಂಚಿಕೆಯಲ್ಲಿ ಕಾದುನೋಡಬೇಕಿದೆ. ಇದನ್ನೂ ಓದಿ: Tiger Shroff Firing |50 ಸಾವಿರ ಅಡ್ವಾನ್ಸ್ ಪಡೆದು ಶೂಟ್ – ಟೈಗರ್ ಫೈರಿಂಗ್ ಟೈಮ್ ಲೈನ್
ಇದು ಸ್ನೇಹದ ಸವಾಲ್!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/3KO270MrRc
— Colors Kannada (@ColorsKannada) October 19, 2026
ಬಿಗ್ಬಾಸ್ ಮನೆಯ ಸದಸ್ಯರಿಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಗೆ ಟಾಸ್ಕ್ವೊಂದನ್ನು ನೀಡಿದ್ದರು. ಆ ಪೈಕಿ ಸ್ಪರ್ಧಿಗಳು ಇತರ ಸ್ಪರ್ಧಿಗಳ ಫೋಟೋವೊಂದನ್ನು ಕೊರಳಿಗೆ ಹಾಕಿಕೊಳ್ಳಬೇಕು. ಆಗ ಒಂದು ಸ್ಥಳದಿಂದ ಸೇಫ್ ಸ್ಥಳಕ್ಕೆ ಕೊನೆಯದಾಗಿ ಯಾರು ಬರುತ್ತಾರೆ, ಅವರ ಕೊರಳಲ್ಲಿರುವ ಫೋಟೋದಲ್ಲಿರುವವರು ನಾಮಿನೇಟ್ ಆಗುತ್ತಾರೆ. ಆದರೆ ತಾಂಡವ್ ಹಾಗೂ ಸೌಂದರ್ಯ ಸೇಫ್ ಜಾಗಕ್ಕೆ ಬರದೇ ಅಲ್ಲೇ ಉಳಿದುಬಿಡುತ್ತಾರೆ.
ಇದರಿಂದಾಗಿ ಕೊನೆಗೆ ಬಿಗ್ಬಾಸ್ ಕ್ಯಾಪ್ಟನ್ ಗಗನ್ಗೆ ಸೌಂದರ್ಯ ಹಾಗೂ ತಾಂಡವ್ ನಡುವೆ ಒಬ್ಬರನ್ನು ನಾಮಿನೇಟ್ ಮಾಡುವಂತೆ ಸೂಚಿಸುತ್ತಾರೆ. ಮನೆಯಲ್ಲಿ ತನಗೆ ಅತ್ಯಂತ ಆಪ್ತರಾಗಿರುವ ಇಬ್ಬರು ಸದಸ್ಯರ ಪೈಕಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಲೇಬೇಕಾದ ಅನಿವಾರ್ಯತೆಯನ್ನು ಗಗನ್ ಮುಂದಿಟ್ಟಿದ್ದಾರೆ. ಇದನ್ನೂ ಓದಿ: 4 ವರ್ಷಗಳಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ ಸೇರಿ 8 ಸೆಲೆಬ್ರಿಟಿಗಳ ಮೇಲೆ ಶೂಟೌಟ್!
ಇಬ್ಬರೂ ಆಪ್ತರೇ ಆಗಿರುವುದರಿಂದ ಯಾರ ಹೆಸರನ್ನು ತೆಗೆದುಕೊಂಡರೂ ಸ್ನೇಹಕ್ಕೆ ಧಕ್ಕೆ ಬರುವ ಭೀತಿ ಗಗನ್ ಅವರನ್ನು ಕಾಡುತ್ತಿದೆ. ಸ್ನೇಹಕ್ಕೆ ಪ್ರಾಮುಖ್ಯತೆ ನೀಡಿ ಆಟದ ಲೆಕ್ಕಾಚಾರ ಬದಿಗಿಡ್ತಾರಾ? ಅಥವಾ ಆಟದ ನಿಯಮಕ್ಕೆ ಕಟ್ಟುಬಿದ್ದು ಒಬ್ಬರ ಸ್ನೇಹವನ್ನು ಬಲಿಕೊಡ್ತಾರಾ? ಎಂಬುದು ಇಡೀ ಮನೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್

