ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮೇಲೆ ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯು ದೇಶವ್ಯಾಪಿ ಸದ್ದು ಮಾಡುತ್ತಿದೆ. ಈ ದಾಳಿಯು ಇಡೀ ಬಾಲಿವುಡ್ ಅನ್ನೇ ಮತ್ತೆ ನಡುಗಿಸಿದೆ. ಈ ಗುಂಡಿನ ದಾಳಿಯಲ್ಲಿ ನಟ ಟೈಗರ್ ಶ್ರಾಫ್ ಬಲಗೈ ಹಾಗೂ ಎದೆ ಭಾಗಕ್ಕೆ ಗಾಯಗಳಾಗಿದೆ. ಇನ್ನು ಬೈಕ್ನಲ್ಲಿ ಬಂದ ಮೂವರು ದಾಳಿಕೋರರ ಫೈರಿಂಗ್ ವೇಳೆ ತಮ್ಮ ಕಾರು ಚಾಲಕ ಗಾಯಗೊಂಡಾಗ ತಕ್ಷಣವೇ ಡ್ರೈವಿಂಗ್ ಸೀಟ್ಗೆ ಜಿಗಿದ ಟೈಗರ್ ಶ್ರಾಫ್ ಕಾರು ಚಲಾಯಿಸಿಕೊಂಡು ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಶೂಟೌಟ್ ನಡೆದಿರೋದು ಇದೇ ಮೊದಲೇನಲ್ಲ, ಹಾಗೆ ನೋಡಿದ್ರೆ, ಕಳೆದ 4 ವರ್ಷಗಳಲ್ಲಿ ಸಲ್ಮಾನ್ ಖಾನ್ ಸೇರಿದಂತೆ 7 ಸೆಲೆಬ್ರಿಟಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ…
1. ಗುರು ರಾಂಧವಾ (ಜೂನ್ 2026)
ದೆಹಲಿಯ ಹೊರವಲಯದ ಪಶ್ಚಿಮ ವಿಹಾರ್ನಲ್ಲಿರುವ ಜಿಮ್ನ ಹೊರಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುರು ರಂಧವಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಳಿಕ ನಡೆದ ಎನ್ಕೌಂಟರ್ ನಂತರ, ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯ್–ಅನಿಲ್ ಪಂಡಿತ್ ಗ್ಯಾಂಗ್ನ ಶೂಟರ್ಗಳನ್ನ ಬಂಧಿಸಿದರು.
2. ರೋಹಿತ್ ಶೆಟ್ಟಿ (1 ಫೆಬ್ರವರಿ 2026)
ಮುಂಬೈನ ಜುಹುವಿನಲ್ಲಿರುವ ಶೆಟ್ಟಿ ಟವರ್ನ ಹೊರಗೆ ಅಪರಿಚಿತ ದಾಳಿಕೋರರು 7.62 ಎಂಎಂ ಪಿಸ್ತೂಲ್ನಿಂದ ಗುಂಡಿನ ದಾಳಿ ನಡೆಸಿದ್ದರು. ಪೊಲೀಸ್ ತನಿಖೆಯಲ್ಲಿ ಲಾರೆನ್ಸ್ ಬಿಷ್ಣೋಯ್–ಶುಭಂ ಲೋಂಕರ್ ಗ್ಯಾಂಗ್ನ ಹೆಸರು ಬೆಳಕಿಗೆ ಬಂದಿತ್ತು.
3. ಎಲ್ವಿಶ್ ಯಾದವ್ (17 ಆಗಸ್ಟ್ 2025)
ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ಮನೆಯ ಮೇಲೆ ಬೈಕ್ನಲ್ಲಿ ಬಂದ ಮೂವರು ದಾಳಿಕೋರರು ಸುಮಾರು 25–30 ಸುತ್ತು ಗುಂಡು ಹಾರಿಸಿದ್ದರು. ಬೆಟ್ಟಿಂಗ್ ಆ್ಯಪ್ ವಿರುದ್ಧದ ಪ್ರತಿಭಟನೆಯಾಗಿ ಈ ದಾಳಿ ನಡೆಸಿದ್ದಾಗಿ ಹಿಮಾಂಶು ಭಾವು ಮತ್ತು ನೀರಜ್ ಫರೀದ್ಪುರಿಯಾ ಗ್ಯಾಂಗ್ ಹೊಣೆ ಹೊತ್ತುಕೊಂಡಿತ್ತು.
4. ಎಪಿ ಧಿಲ್ಲೋನ್ (ಸೆಪ್ಟೆಂಬರ್ 2024)
ಕೆನಡಾದ ವ್ಯಾಂಕೋವರ್ನಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಲಾಯಿತು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋದಾರಾ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
5. ಸಲ್ಮಾನ್ ಖಾನ್ (14 ಏಪ್ರಿಲ್ 2024)
ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ನ ಹೊರಗೆ ಬೈಕ್ನಲ್ಲಿ ಬಂದ ದಾಳಿಕೋರರು 5 ಸುತ್ತು ಗುಂಡು ಹಾರಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿತು.
6. ಗಿಪ್ಪಿ ಗ್ರೆವಾಲ್ (25 ನವೆಂಬರ್ 2023)
ಕೆನಡಾದ ವ್ಯಾಂಕೋವರ್ನ ವೈಟ್ ರಾಕ್ ಪ್ರದೇಶದಲ್ಲಿರುವ ಅವರ ಮನೆಯ ಹೊರಗೆ ಮನಬಂದಂತೆ ಗುಂಡಿನ ದಾಳಿ ನಡೆಸಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ದಾಳಿಯ ಹೊಣೆ ಹೊತ್ತುಕೊಂಡಿತು.
7. ಸಿಧು ಮೂಸೆವಾಲಾ (29 ಮೇ 2022)
ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಕಾರಿನಲ್ಲಿ ಬಂದ ದಾಳಿಕೋರರು ಅವರ ಥಾರ್ ವಾಹನದ ಮೇಲೆ 30ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಈ ಕೊಲೆ ನಡೆಸಿತ್ತು.
8. ದಿಶಾ ಪಟಾನಿ (2025 ಸೆಪ್ಟೆಂಬರ್)
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲೂ 2025ರ ಸೆಪ್ಟೆಂಬರ್ನಲ್ಲಿ ಗುಂಡಿನ ದಾಳಿ ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಅಪರಿಚಿತರು ದಿಶಾ ಅವರ ಮನೆಯ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ಖುಷ್ಬೂ ಪಟಾನಿ ಅವರು ಕಥಾ ವಾಚಕ ಅನಿರುದ್ಧ ಆಚಾರ್ಯ ಅವರ ವಿರುದ್ಧ ʻಮಹಿಳಾ ವಿರೋಧಿ ಹೇಳಿಕೆʼ ನೀಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಾಳಿ ನಡೆಸಿತ್ತು. ಗೋಲ್ಡಿ ಬ್ರಾರ್ ಗ್ಯಾಂಗ್ ಈ ದಾಳಿ ಹೊಣೆ ಹೊತ್ತುಕೊಂಡಿತ್ತು.



