ಹುಬ್ಬಳ್ಳಿ: ಕೆಪಿಎಸ್ಸಿ (KPSC Scam) ಹಗರಣ (BJP) ಬಿಜೆಪಿಯವರ ಕೂಸು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K Shivakumar) ಆರೋಪಿಸಿದ್ದಾರೆ. ಹಗರಣದ ವಿಚಾರವನ್ನು ಸರ್ಕಾರದತ್ತ ತಿರುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.
ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಪರ ಮಾತನಾಡಿದ ಡಿಕೆಶಿ, ಬರಗಾಲದ ನಡುವೆಯೇ ಪದವೀಧರ ಕ್ಷೇತ್ರದ ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ರೈತರ ಬಳಿಗೆ ತೆರಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಸಮೀಕ್ಷೆ ನಡೆಸಿ ಲಿಂಬಿಕಾಯಿ ಆಯ್ಕೆ
ಸಂಸತ್ ಚುನಾವಣೆಗೆ ಮೋಹನ್ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಪಕ್ಷದಲ್ಲಿ ಜಾತಿವಾರು ಟಿಕೆಟ್ ಹಂಚಿಕೆಯ ಲೆಕ್ಕಾಚಾರದಿಂದ ಅವರಿಗೆ ಟಿಕೆಟ್ ಕೈತಪ್ಪಿತು. ಇದೀಗ ಸಮೀಕ್ಷೆ ನಡೆಸಿ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಅವರ ಹೆಸರನ್ನು ಘೋಷಿಸಲಾಗಿದೆ. ಪಕ್ಷದ ಇತಿಹಾಸದಲ್ಲೇ ಈ ರೀತಿಯ ಆಯ್ಕೆ ಇದೇ ಮೊದಲು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಎಸ್ಸಿ ಹಗರಣದ ಸಮಗ್ರ ತನಿಖೆ
ಕೆಪಿಎಸ್ಸಿ ಹಗರಣದ ಕುರಿತು ಮಾತನಾಡಿದ ಡಿಕೆಶಿ, ಸಮಗ್ರ ತನಿಖೆ ನಡೆಸಲಾಗುವುದು. ಹಣ ಅಥವಾ ಪ್ರಭಾವಕ್ಕೆ ಮಣಿಯದೆ, ನ್ಯಾಯಸಮ್ಮತ ಪರೀಕ್ಷೆಯ ಮೂಲಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
ಯುವಕರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರಿನ ಹೊರತಾಗಿ ಇತರ ನಗರಗಳಲ್ಲಿಯೂ ಖಾಸಗಿ ವಲಯಕ್ಕೆ ಉತ್ತೇಜನ ನೀಡಲು ಹಾಗೂ ಕಾರ್ಖಾನೆಗಳ ಸ್ಥಾಪನೆಗೆ ವಿಶೇಷ ಅನುದಾನ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸೌತಡ್ಕ ದೇವಾಲಯದ ಎದುರು ಮಾಜಿ ರೌಡಿಶೀಟರ್ನಿಂದ ಮಹಿಳೆಯರ ಮೇಲೆ ಹಲ್ಲೆ
ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ವಿಚಾರವನ್ನೂ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಒಂದೊಂದು ಕ್ಷೇತ್ರದಲ್ಲಿ 11ರಿಂದ 12 ಸಾವಿರ ಮತಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿದರು. ಎಲ್ಲೋ ಕುಳಿತು ಮತಗಳನ್ನು ಅಳಿಸುವಂತೆ ಪಟ್ಟಿ ಮುದ್ರಿಸಲಾಗಿದೆ ಎಂದು ದೂರಿದರು. ಜನರ ಮತಗಳನ್ನು ಉಳಿಸಲು ತಾವು ಮತ್ತು ಸಚಿವ ಸಂಪುಟ ಹೋರಾಟ ನಡೆಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಇರಬೇಕು ಎಂಬುದು ಕಾಂಗ್ರೆಸ್ನ ಆಶಯವಾಗಿದೆ. ಇಡೀ ಸರ್ಕಾರ ಮೋಹನ್ ಲಿಂಬಿಕಾಯಿ ಅವರೊಂದಿಗೆ ಇದೆ ಎಂದು ಡಿಕೆಶಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಸಂಕನೂರಿಗೆ ಈಗಾಗಲೇ ಎರಡು ಬಾರಿ ಅವಕಾಶ ನೀಡಲಾಗಿದೆ. ಆದರೆ, ಅವರು ಯಾವುದೇ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.ಇದನ್ನೂ ಓದಿ: ಯೆಮನ್ ಗಡಿಯ ಬಳಿ ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ಗಳು ದುರ್ಮರಣ
