ಮಂಗಳೂರು: ಸೌತಡ್ಕ ದೇವಾಲಯದ (Sowthadka Temple) ಎದುರು ಮಾಜಿ ರೌಡಿಶೀಟರ್ ಒಬ್ಬ ಹೂವಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯರ (Womens) ಮೇಲೆ ಹಲ್ಲೆ ನಡೆಸಿದ್ದಾನೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಹೊರಭಾಗದಲ್ಲಿರುವ ಅಂಗಡಿ ವಿಚಾರವಾಗಿ ಈ ಗಲಾಟೆ ನಡೆದಿದೆ. ಟೆಂಡರ್ ಮೂಲಕ ಹೂವಿನ ಸ್ಟಾಲ್ನ್ನು ಮಾಜಿ ರೌಡಿಶೀಟರ್ ಕೊಕ್ಕಡದ ರಾಘವ ಭಂಡಾರಿ ಪಡೆದಿದ್ದ. ಹರಾಜು ಮಾಡಿದ ಬಳಿಕ ಹಿಂದಿನ ಹೂವಿನ ವ್ಯಾಪಾರಿಗಳು ಬಿಟ್ಟುಕೊಟ್ಟಿರಲಿಲ್ಲ. ಇಂದು ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶ ಮಾಡಿದ ರಾಘವ ಭಂಡಾರಿ ಅಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಶಿವಮೊಗ್ಗ | ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ
ಮಹಿಳೆಯರು ನೀಡಿದ ದೂರಿನ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಊಟ ಮಾಡಿ ಮಲಗಿದ್ದ 3 ವರ್ಷದ ಮಗು ಅನುಮಾನಾಸ್ಪದ ಸಾವು
