ಬೆಂಗಳೂರು: ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲಾ ಬಸ್ ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಿದೆ.
ರಸ್ತೆ ಸುರಕ್ಷತಾ ನಿಯಮಗಳ ಪ್ರಕಾರ, ವಾಣಿಜ್ಯ ವಾಹನಗಳು ಮತ್ತು ಬಸ್ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ನಗರದ ಸಿಗ್ನಲ್ಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾಗಳು ಮತ್ತು ಸಂಚಾರ ಪೊಲೀಸರು ಸೀಟ್ ಬೆಲ್ಟ್ ಧರಿಸದ ಚಾಲಕರನ್ನ ಪತ್ತೆ ಮಾಡಿ ದಂಡ ವಿಧಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ಟ್ರಾಫಿಕ್ ಜಾಮ್ – 6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು!

ಅದ್ರಂತೆ ನಗರದ ಕೆಎ 57, ಎಫ್ 6558 ಬಸ್ನ ಚಾಲಕನಿಗೆ ಸೀಟ್ ಬೆಲ್ಟ್ ಹಾಕದೇ ಇದ್ದಿದ್ದಕ್ಕೆ ವಿಧಾನಸೌಧ ಮೆಟ್ರೋ ನಿಲ್ದಾಣದ ಬಳಿ 500 ರೂಪಾಯಿ ದಂಡವನ್ನ ಹಾಕಲಾಗಿದೆ. ಆದ್ರೇ ಬಹಳಷ್ಟು ಬಿಎಂಟಿಸಿ ಚಾಲಕರು ಸೀಟ್ ಬೆಲ್ಟ್ ಹಾಕ್ತಿಲ್ಲ ಎಂಬ ಆರೋಪವೂ ಕೇಳಿಬರ್ತಿದೆ. ಮತ್ತೊಂದೆಡೆ ಬಸ್ಗಳಲ್ಲಿ ಕೆಲ ಬಸ್ಗಳಲ್ಲಿ ಸೀಟ್ ಬೆಲ್ಟ್ ಸರಿಯಾಗಿ ವರ್ಕ್ ಆಗ್ತಿಲ್ಲ.
ಈ ಬಗ್ಗೆ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ನಲ್ಲಿ ದೃಶ್ಯಗಳು ಸೆರೆಯಾಗಿವೆ. ಈ ಸೀಟ್ ಬೆಲ್ಟ್ಗಳನ್ನ ಸರಿಪಡಿಸೋ ಕಾರ್ಯಕ್ಕೆ ಬಿಎಂಟಿಸಿ ಮುಂದಾಗಬೇಕಿದೆ. ಜೊತೆಗೆ ಚಾಲಕರಲ್ಲೂ ಜಾಗೃತಿ ಮೂಡಿಸಬೇಕಿದೆ. ಇದನ್ನೂ ಓದಿ: ವೀಕೆಂಡ್, ಹಬ್ಬದ ಎಫೆಕ್ಟ್; ಊರುಗಳತ್ತ ಜನರು – ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್
