– ಬಿಜೆಪಿ ‘ರಾಷ್ಟ್ರೀಯತೆ’ಯನ್ನೂ ಪ್ರಶ್ನಿಸಿದ ಎಐಎಂಐಎಂ ಮುಖ್ಯಸ್ಥ
– ಖಡಕ್ ಉತ್ತರ ನೀಡದ್ದಕ್ಕೆ ಕೇಂದ್ರದ ವಿರುದ್ಧವೂ ವಾಗ್ದಾಳಿ
ಹೈದರಾಬಾದ್: ಭಾರತದ ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಯನ್ನೇ ಪ್ರಶ್ನಿಸಿ ವಿವಾದ ಸೃಷ್ಟಿಸಿರುವ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ (Elon Musk) ವಿರುದ್ಧ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ತೀವ್ರ ಟೀಕಾಕಾರರಾಗಿರುವ ಓವೈಸಿ, ದೇಶದ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ವಿದೇಶಿ ಉದ್ಯಮಿಯೊಬ್ಬ ಭಾರತಕ್ಕೆ (India) ನಿರ್ದೇಶನ ನೀಡುವುದನ್ನು ಕಟುವಾಗಿ ವಿರೋಧಿಸಿ ಅಚ್ಚರಿ ಮೂಡಿಸಿದ್ದಾರೆ. ಇದೇ ವೇಳೆ, ಮಸ್ಕ್ಗೆ ದಿಟ್ಟ ಉತ್ತರ ನೀಡದ ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಬಿಜೆಪಿಯ ರಾಷ್ಟ್ರೀಯತೆಯನ್ನೂ ಅಣಕಿಸಿದ್ದಾರೆ.
ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, “ನಾವು ಯಾವಾಗಲೂ ನರೇಂದ್ರ ಮೋದಿ ಅವರ ರಾಜಕೀಯವನ್ನು ವಿರೋಧಿಸುತ್ತೇವೆ, ಮುಂದೆಯೂ ವಿರೋಧಿಸುತ್ತೇವೆ. ಆದರೆ ಒಬ್ಬ ವಿದೇಶಿ (ಬಿಳಿಯ ವ್ಯಕ್ತಿ) ನಮ್ಮ ಭಾರತದ ಪ್ರಧಾನಿ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದನ್ನು ಹೇಗೆ ಒಪ್ಪಲು ಸಾಧ್ಯ? ನಮ್ಮ ದೇಶದ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ಭಾರತವೇ ನಿರ್ಧರಿಸುತ್ತದೆ. ಎಲ್ಲಿಯೋ ಕುಳಿತ ಈ ಬಿಳಿಯ ವ್ಯಕ್ತಿ ನಮಗೆ ಆದೇಶ ನೀಡಲು ಯಾರು” ಎಂದು ಪ್ರಶ್ನಿಸಿ ಗುಡುಗಿದರು. ಇದನ್ನೂ ಓದಿ:PUBLiC TV Explainer| ಭಾರತ ಇನ್ನೂ ಸ್ಟಾರ್ಲಿಂಕ್ಗೆ ಅನುಮತಿ ನೀಡಿಲ್ಲ ಯಾಕೆ? ಆತಂಕ ಏನು?
AIMIM chief Asaduddin Owaisi has never been reluctant to take on Prime Minister Narendra Modi. But when the world’s first trillionaire, Elon Musk, questioned the authority behind India’s political and business decisions, the Hyderabad MP drew a distinction between opposing the government and allowing a foreign businessman to dictate terms to the country. His response also offered a pointed contrast with Rahul Gandhi, who seized on Musk’s allegations to renew his attack on the BJP-led Centre’s ties with powerful industrialists in India.
The dispute began with SpaceX owner and Tesla CEO Musk’s public complaints about the delay in allowing Starlink, his satellite internet company, to begin commercial operations in India. But it has since acquired a political dimension, with the opposition seeing an opportunity to question the government’s relationship with big business, while Owaisi has turned the controversy into a test of the BJP’s own nationalist credentials.
Read more: https://t.co/N29dg8DutI
#AsaduddinOwaisi #ElonMusk #RahulGandhi #Starlink #NarendraModi #IndianPolitics
— IndiaToday (@IndiaToday) October 16, 2026
“ವಿದೇಶಿ ಶ್ರೀಮಂತನೊಬ್ಬನ ಹೊಟ್ಟೆ ತುಂಬಿಸಲು ನಮ್ಮ ದೇಶದ ನಾಗರಿಕರ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಲು ಸಾಧ್ಯವಿಲ್ಲ. ಭಾರತದ ನೀತಿ ನಿಯಮಗಳು ದೇಶದ ಹಿತಾಸಕ್ತಿಯ ಆಧಾರದ ಮೇಲೆ ನಿರ್ಧಾರವಾಗಬೇಕೇ ಹೊರತು ವಿದೇಶಿಗರ ಒತ್ತಡಕ್ಕಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, “ಪ್ರತಿನಿತ್ಯ ರಾಷ್ಟ್ರೀಯತೆಯ ಜಪ ಮಾಡುವ ಬಿಜೆಪಿ, ಪ್ರಭಾವಿ ವಿದೇಶಿ ಉದ್ಯಮಿಯೊಬ್ಬ ದೇಶದ ಅಧಿಕಾರವನ್ನೇ ಪ್ರಶ್ನಿಸಿದಾಗ ಯಾಕೆ ಮೌನವಾಗಿದೆ? ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ಬಿಳಿ ಚರ್ಮದವರನ್ನು ಕಂಡರೆ ಅಷ್ಟೊಂದು ಭಯವೇಕೆ? ದೇಶೀಯ ರಾಜಕೀಯ ವಿರೋಧಿಗಳ ವಿರುದ್ಧ ತೋರುವ ಬಲಪ್ರದರ್ಶನವನ್ನು ಮಸ್ಕ್ ವಿರುದ್ಧ ತೋರಿಸಲು ಪ್ರಧಾನಿ ಮೋದಿಗೆ ಸಾಧ್ಯವಿಲ್ಲವೇ? ಭಾರತದ ನಿರ್ಧಾರಗಳನ್ನು ಭಾರತವೇ ತೆಗೆದುಕೊಳ್ಳುತ್ತದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿ” ಎಂದು ಸವಾಲು ಹಾಕಿದರು. ಇದನ್ನೂ ಓದಿ: ಎಲ್ಲಾ ಸಂಸ್ಥೆಗಳು ದೇಶದ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು – ಸ್ಟಾರ್ಲಿಂಕ್ ಬಗ್ಗೆ ಮೌನ ಮುರಿದ ರಿಲಯನ್ಸ್!

