-ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪಿಎಂ ಮಧ್ಯಸ್ಥಿಕೆ ವಹಿಸಲಿ
ಬೆಂಗಳೂರು: ಸ್ಟಿಂಗ್ ಆಪರೇಷನ್ ಯಾರೇ ಮಾಡಿದ್ರು ತಪ್ಪು. ಅವರನ್ನು ಬಲಿ ಹಾಕಬೇಕು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಆಗ್ರಹಿಸಿದ್ದಾರೆ.
ಸ್ಟಿಂಗ್ ಆಪರೇಷನ್ (Sting Operation) ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಅನ್ನೋದು ಕೆಟ್ಟ ಚಾಳಿ. ಯಾರೇ ಮಾಡಿದ್ರು ಇದು ಸರಿಯಲ್ಲ. ರಾಜಕೀಯದಲ್ಲಿ ಪೈಪೋಟಿ ಮಾಡಬಹುದು. ಇಂತಹದ್ದು ಮಾಡೋದು ಸರಿಯಲ್ಲ. ಸಿದ್ದರಾಮಯ್ಯ (Siddaramaiah) ಅತ್ಯುತ್ತಮ ನಾಯಕ. ಅವರ ಚಾರಿತ್ರಿಕ ವಧೆ ಮಾಡೋ ಕೆಲಸ ಆಗ್ತಿದೆ. ಈ ಸ್ಟಿಂಗ್ ಯಾರೇ ಮಾಡಿದ್ರೂ ಅವರ ಬಲಿ ಹಾಕಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್ನವರೇ: ಸಿ.ಟಿ ರವಿ
ಈ ಸ್ಟಿಂಗ್ ಆಪರೇಷನ್ ಕರ್ನಾಟಕದಲ್ಲಿ ನಿರ್ನಾಮ ಮಾಡಬೇಕು. ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ನಿಲ್ಲಬೇಕು. ರಾಜಕೀಯ, ದುಡ್ಡು ಹೀಗೆ ಬೇರೆ ಬೇರೆ ವಿಚಾರಕ್ಕೆ ದೇಶ, ವಿದೇಶದಲ್ಲಿ ಆಗುತ್ತದೆ. ಇದರ ಬಗ್ಗೆ ಕ್ರಮ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಮಾತನಾಡಿ, ಕಬ್ಬು ಬೆಳೆಗಾರರು ಹೋರಾಟ ಮಾಡ್ತಾ ಇದ್ದಾರೆ. ಕೇಂದ್ರದ ಕೈಯಲ್ಲಿ ಇದು ಇದೆ. ಎಂಎಸ್ಪಿ, ಎಫ್ಆರ್ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರ. ಎಥನಾಲ್ ಉತ್ಪಾದನೆ ಮಾಡಿ ಅಂತ ಹೇಳಿತ್ತು, ಆದರೆ ಈಗ ಕೇಂದ್ರ ಎಥನಾಲ್ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ರೈತರು ಹೋರಾಟ ಮಾಡ್ತಾ ಇದ್ದಾರೆ. ಪ್ರಧಾನಿಗಳು, ಕೇಂದ್ರದ ಸಚಿವರು ರೈತರನ್ನು ಕರೆದು ಮಾತಾಡಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಮತ್ತೆ 9 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ – ಒಟ್ಟು ಸಂಖ್ಯೆ 226ಕ್ಕೆ ಏರಿಕೆ: ಡಿಸಿಎಂ
ವೈಜ್ಞಾನಿಕವಾಗಿ ದರ ಫಿಕ್ಸ್ ಮಾಡಬೇಕು. ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು. ವೈಜ್ಞಾನಿಕ ವ್ಯವಸ್ಥೆ ಮಾಡಬೇಕು. ರೈತರು ಕಾರ್ಖಾನೆ ಹಿತ ಕಾಯಬೇಕು. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಹೆಚ್ಡಿಕೆಗೆ ಪ್ರಿಯಾಂಕ್ ಎಚ್ಚರಿಕೆ

