-ರಾಜ್ಯದಲ್ಲಿ ಭೀಕರ ಬರಗಾಲ, ಆದ್ರೆ ಕಾಂಗ್ರೆಸ್ ಮಾತ್ರ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿದೆ
ಬೆಂಗಳೂರು: ಕೃತಜ್ಞತೆ ಇಲ್ಲದ ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಬೆನ್ನಿಗೆ ಚೂರಿ ಹಾಕಿದೆ. ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ, ಯೂಸ್ ಆಂಡ್ ಥ್ರೋ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಹಳ ನೋವಿನಿಂದ, ಒಲ್ಲದ ಮನಸ್ಸಿನಿಂದ ಹೇಳ್ತಿದ್ದೀನಿ. ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದವರು. ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದವರು, ಅನ್ನರಾಮಯ್ಯ ಅವರು. ಆದರೆ ಇವತ್ತು ಸಿದ್ದರಾಮಯ್ಯ ಅವರಿಗೆ ಕೋರ್ಟ್ ಮೆಟ್ಟಿಲೇರುವ ನೋವು ಕೊಟ್ಟಿದ್ದೆ ಕಾಂಗ್ರೆಸ್. ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ (Congress) ಇದು. ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವ ದಯನೀಯ ಸ್ಥಿತಿಗೆ ತಂದಿದ್ದಾರೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ (Sting Opertion) ಬಗ್ಗೆ, ವಿಡಿಯೋಗಳ ಬಗ್ಗೆ ಕೂಡಲೇ ಎಫ್‌ಐಆರ್ ಆಗಬೇಕು ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ಸ್ಟಿಂಗ್, ಸಿಡಿ ಸಂಸ್ಕೃತಿ ಹುಟ್ಟುಹಾಕಿದ್ದೇ ಡಿಕೆಶಿ; ಸಚಿವರ ಮೇಲೆಯೇ ಸಿಎಂ ಗೂಢಚಾರಿಕೆ: ಹೆಚ್‌ಡಿಕೆ ಬಾಂಬ್
ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸರ್ಕಾರದ ಬಿಡಿಗಾಸಿನ ಹಣವನ್ನು ವಾಪಸ್ಸು ಕೊಡ್ತಿದ್ದಾರೆ. ಇದ್ಯಾವುದರ ಬಗ್ಗೆ ಗಮನ ಇಲ್ಲದೇ ಕಾಂಗ್ರೆಸ್ ಸರ್ಕಾರ ಈ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿ ಹೋಗಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ದೆಹಲಿಯಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ರಾಜ್ಯದ ಜನರ ಬಗ್ಗೆ ಒಂಚೂರು ಕಾಳಜಿ ಇಲ್ಲದೇ, ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರೆಂದು ಇದೇ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
217 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ, 46 ಸಾವಿರ ಕೋಟಿ ರೂ. ನಷ್ಟ ಆಗಿದೆ, ಆದರೆ ನೀವು ಭಿಕ್ಷೆ ರೀತಿ 1,200 ಕೋಟಿ ರೂ.ಕೊಟ್ಟಿದ್ದೀರಿ. ದೇವಸ್ಥಾನಕ್ಕೆ ದಕ್ಷಿಣಿಯೇ 500, 1000 ರೂ. ಹಾಕುತ್ತಾರೆ. ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲ. ಬರ ಇದ್ದರೂ ದಸರಾ ಸರಳ ಆಚರಣೆ ಬಿಟ್ಟು, ವಿಜೃಂಭಣೆಯಿAದ ಮಾಡ್ತಿದ್ದಾರೆ. ರೈತನಿಗೆ 2,500 ರೂ. ಕೊಡ್ತಿದ್ದೀರಿ ನಿಮಗೆ ಏನಾದರೂ ಮಾನವೀಯತೆ ಇದೆಯಾ? ವಿಶೇಷ ಅಧಿವೇಶನ ಮಾಡಿ ಏನು ಮಾಡಿದ್ರಿ, ಬರೀ ದುಡ್ಡು ಖರ್ಚು ಮಾಡಿದ್ರಿ ಅಷ್ಟೇ. ಬರಗಾಲದ ಬಗ್ಗೆ, ಸರ್ಕಾರದ ಕ್ರಮಗಳ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಹೈ ರಿಸ್ಕ್ ಖಾಯಿಲೆ ಔಷಧಿಗಳಿಗೆ ದುಪ್ಪಟ್ಟು ದರ ವಸೂಲಿ ವರದಿ – `ಪಬ್ಲಿಕ್ ಟಿವಿ’ಗೆ ಧನ್ಯವಾದ ಹೇಳಿದ ಸಚಿವ ಖಾದರ್
ರೈತರಿಗೆ ಎಲ್ಲಾ ಕಡೆಗಳಲ್ಲಿ ಸಾಲದ ನೋಟಿಸ್ ಕೊಡ್ತಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈನುಗಾರಿಕೆಯಲ್ಲಿ ವಿಶೇಷ ನೆರವು ಕೊಡ್ತೀವಿ ಅಂದಿದ್ರು, ಕೆಎಂಎಫ್ ಲಾಭದಲ್ಲಿದ್ರೆ ಹಾಲಿನ ದರ ಏಕೆ ಏರಿಕೆ ಮಾಡ್ತೀರಾ? ಹೆಸರು ರೈತರದ್ದು ಲೂಟಿ ಸರ್ಕಾರದ್ದು. ಈ ಕಳ್ಳಾಟ ಬಹಳ ದಿನಗಳ ಕಾಲ ನಡೆಯೋದಿಲ್ಲ. ಡಿ.ಕೆ.ಶಿವಕುಮಾರ್ ಸರ್ಕಾರ ರಿಯಲ್ ಎಸ್ಟೇಟ್ ಸರ್ಕಾರ ಎಂದು ರೈತರಿಗೆ ಅರ್ಥ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬರೀ ಸ್ಟಿಂಗ್ ಆಪರೇಷನ್. ಕ್ಯಾಬಿನೆಟ್‌ನಲ್ಲಿಯೂ ಅದೇ ಚರ್ಚೆ ಮಾಡ್ತಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ಕ್ಯಾಬಿನೆಟ್ ಗೌರವವನ್ನೇ ಹಾಳು ಮಾಡಿದ್ದಾರೆ. ಸಚಿವರನ್ನ ಮನೆಗೆ ಕರೆದು ಟೀ, ಕಾಫಿ ಕೊಟ್ಟು ಹೇಳ್ಕೊಬೇಕಿತ್ತು. ಡಿನ್ನರ್ ಕರೆದು ಹೇಳಬಹುದಿತ್ತು. ನಾಚಿಕೆ ಇದೆಯಾ? ನಿಮಗೆ ಮಾನ ಮರ್ಯಾದೆ ಇದೆಯಾ? ಸರ್ಕಾರ ಅಧಿಕಾರದಲ್ಲಿ ಇರಲು ಯೋಗ್ಯತೆ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಜಾರಕಿಹೊಳಿಗೆ ಸ್ಟಿಂಗ್ ಮಾಡಿದವರೇ ಸಿದ್ದರಾಮಯ್ಯ ಮೇಲೆ ಮಾಡಿದ್ದಾರೆ: ಕೆ.ಎನ್. ರಾಜಣ್ಣ

