ಬೆಂಗಳೂರು: ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸ್ಗಳ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಿದೆ. ಅಣಕು ಫಲಿತಾಂಶದಲ್ಲಿ ಒಟ್ಟು 4,842 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ.
ಅಣಕು ಸೀಟು ಹಂಚಿಕೆಯ ಫಲಿತಾಂಶ ಪರಿಶೀಲಿಸಿದ ಬಳಿಕ ಅಭ್ಯರ್ಥಿಗಳು ತಮ್ಮ ಆಯ್ಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಕೆಇಎ ಅವಕಾಶ ನೀಡಿದೆ. ಅಕ್ಟೋಬರ್ 14ರ ಬೆಳಿಗ್ಗೆ 11 ಗಂಟೆಯವರೆಗೆ ಈಗಾಗಲೇ ದಾಖಲಿಸಿರುವ ಆಯ್ಕೆಗಳನ್ನು ಬದಲಿಸಬಹುದು. ಹೊಸ ಆಯ್ಕೆಗಳನ್ನು ಸೇರಿಸಲು ಅಥವಾ ಅಗತ್ಯವಿಲ್ಲದ ಆಯ್ಕೆಗಳನ್ನು ಅಳಿಸಲು ಕೂಡ ಅವಕಾಶವಿದೆ.
ಇದುವರೆಗೆ ಇಚ್ಛೆ ಅಥವಾ ಆಯ್ಕೆಗಳನ್ನು ದಾಖಲಿಸದ ಅಭ್ಯರ್ಥಿಗಳು ಸಹ ನಿಗದಿತ ಅವಧಿಯೊಳಗೆ ಹೊಸದಾಗಿ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್ಗಳ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ
ಅಭ್ಯರ್ಥಿಗಳು ಅಣಕು ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಯ್ಕೆಗಳನ್ನು ಪರಿಶೀಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಆಯುಷ್ ಕೋರ್ಸ್ಗಳ ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಹೊಸ ಫಾರ್ಮ್ 6ಕ್ಕೆ ನಾವು ಅನುಮೋದನೆ ಕೊಟ್ಟಿಲ್ಲ: ಅ.27ಕ್ಕೆ ಅರ್ಜಿಗಳ ಪರಿಶೀಲನೆಯೆಂದ ಸುಪ್ರೀಂ

