ಬೆಂಗಳೂರು: ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳೇ (CM DK Shivakumar) ನಿರ್ಧರಿಸಬೇಕು ಎಂದು ಡಿಸಿಎಂ ಪರಮೇಶ್ವರ್ (G parameshwara) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿಎಂ ಅವರು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಹತ್ತಿರವೇ ಗುಪ್ತಚರ ಇಲಾಖೆ ಇದೆ. ಅವರಿಗೆ ಒಂದಷ್ಟು ಮಾಹಿತಿ ಬಂದಿರುತ್ತೆ. ಹಾಗಾಗಿ ಹೇಳಿದ್ದಾರೆ. ಆದರೆ, ಸಿಎಂ ಮೇಲೆ ಸ್ಟಿಂಗ್ ಆಪರೇಷನ್ ಆಗಿರೋದು ನಮ್ಮ ಗಮನಕ್ಕೆ ಬಂದಿಲ್ಲ. ನಾವು ಯಾವುದೇ ಸಮಸ್ಯೆಗಳನ್ನು ಕಡೆಗಣಿಸಿಲ್ಲ. ಡೈವರ್ಟ್ ರಾಜಕಾರಣ ಮಾಡ್ತಿಲ್ಲ. ಸ್ಟಿಂಗ್ ಆಪರೇಷನ್ನಲ್ಲಿ ವಿಪಕ್ಷಗಳ ಕೈವಾಡ ಇದೆಯಾ? ಇಲ್ವಾ ಅಂತ ಹೆಚ್ಚು ಮಾಹಿತಿ ಬಂದಂತೆ ಗೊತ್ತಾಗುತ್ತೆ. ತನಿಖೆ ಬಗ್ಗೆ ಸಿಎಂ ಅವರೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬರ ವಿಚಾರವಾಗಿ ಸರ್ವಪಕ್ಷದ ನಿಯೋಗ ಕರೆದೊಯ್ಯುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ರೂಪಿಸಲು ರಾಜಕೀಯ ವ್ಯವಹಾರಗಳ ಸಮಿತಿಯ ಅಗತ್ಯ ಈಗ ಇದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅಗತ್ಯವಿರಲಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಅದರ ಅಗತ್ಯ ಇದೆ ಎಂದು ಹೇಳಿದ್ದಾರೆ. ಹೈಕಮಾಂಡ್ ಒಪ್ಪಿಗೆ ತೆಗೆದುಕೊಂಡು ರಚನೆ ಮಾಡುತ್ತಾರೆ. ಸಿಎಂ ಜೊತೆಗೂ ಇದರ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ಈ ರೀತಿಯ ಸಮಿತಿ ರಚನೆ ಅವಶ್ಯಕತೆ ಇರುತ್ತದೆ, ಕೆಲವೊಮ್ಮೆ ಇರೊದಿಲ್ಲ. ಯಾವ ಉದ್ದೇಶಕ್ಕೆ ಮಾಡುತ್ತಾರೆ ಅನ್ನೋದು ಮುಖ್ಯ. ಪದರಹಿತ ಹುದ್ದೆಗಳನ್ನು ನಮ್ಮ ಪಕ್ಷದಲ್ಲಿ ಕೊಡುತ್ತಾರೆ. ಇಂತಹ ವೇಳೆಯಲ್ಲಿ ಈ ಸಮಿತಿ ಬೇಕಾಗುತ್ತದೆ. ಸಿಎಂ ಆದವರು ಕೆಲವೊಮ್ಮೆ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: Tamilnadu Bypolls | 2 ಕ್ಷೇತ್ರದಲ್ಲಿ ಉಪಚುನಾವಣೆ ಗೆದ್ದು ಬೀಗಿದ ಟಿವಿಕೆ
ಈವರೆಗೆ 217 ತಾಲೂಕುಗಳು ಬರಪೀಡಿತ ಅಂತ ಘೋಷಣೆ ಮಾಡಿದ್ದೇವೆ. ಉಳಿದ 23 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ಮಾಡ್ತಿದ್ದೇವೆ. ಇನ್ನೂ 8ರಿಂದ 10 ತಾಲೂಕುಗಳು ಬರ ಮಾನದಂಡದ ಅಡಿ ಬರಬಹುದು. ಪರಿಶೀಲನಾ ವರದಿ ಬಂದ ಮೇಲೆ ಅಂತಿಮ ಮೆಮೊರಾಂಡಮ್ ಸಿದ್ಧ ಮಾಡುತ್ತೇವೆ. ಅದಾದ ಬಳಿಕ ಸಿಎಂ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಯೋಚಿಸಿದ್ದಾರೆ. ಬಿಜೆಪಿಯವರು ನಿಯೋಗದ ಜೊತೆ ಬರಲ್ಲ ಅಂತಿದ್ದಾರೆ. ಅವರಿಗೆ ನಾವು ಇನ್ನೊಮ್ಮೆ ಕೇಳುತ್ತೇವೆ. ಇಲ್ಲದಿದ್ದರೆ ನಾವೇ ಹೋಗಿ ಮನವಿ ಕೊಟ್ಟು ಬರುತ್ತೇವೆ ಎಂದರು.ಇದನ್ನೂ ಓದಿ: ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ – ಗಣಿಗ ರವಿಗೆ ವಿಜಯೇಂದ್ರ ಟಾಂಗ್

