– ಇಂದು ರಾತ್ರಿ 9 ಗಂಟೆಯಿಂದ ಮೆಟ್ರೋ ನಿಲ್ದಾಣಗಳು ಬಂದ್
ನವದೆಹಲಿ: ದೆಹಲಿಯಲ್ಲಿ ನಾಳೆ (ಅ. 10) ನಡೆಯಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ 57 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ದೆಹಲಿ ಮೆಟ್ರೋ ರೈಲು ನಿಗಮ (DMRC) ನಿರ್ಧರಿಸಿದೆ.
ಇಂದು ರಾತ್ರಿ 9 ಗಂಟೆಯಿಂದ ಈ ನಿರ್ಬಂಧಗಳು ಜಾರಿಗೆ ಬರಲಿದ್ದು, ಪರಿಸ್ಥಿತಿ ಸುಧಾರಿಸುವವರೆಗೆ ಇದೇ ಸ್ಥಿತಿ ಮುಂದುವರಿಯಲಿವೆ. ಆದರೆ, ನಿಲ್ದಾಣಗಳನ್ನೇ ಸಂಪೂರ್ಣವಾಗಿ ಬಂದ್ ಮಾಡುತ್ತಿಲ್ಲ; ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ “ಮತ ಕಳ್ಳತನ” ಆರೋಪದ ಮೇಲೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಪ್ರತಿಭಟನೆಯ ವೇಳೆ ಸೂಕ್ಷ್ಮ ಪ್ರದೇಶಗಳತ್ತ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು DMRCಗೆ ಮನವಿ ಮಾಡಿದ್ದಾರೆ. ಅಗತ್ಯವಿದ್ದರೆ ಕೆಲವು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ನಿರ್ಬಂಧಿಸಲು ಸಹ ಸೂಚಿಸಲಾಗಿತ್ತು. ಇದನ್ನೂ ಓದಿ: ಸಿಇಸಿ ವಿರುದ್ಧ ಪ್ರತಿಭಟನೆ – ಇಂಡಿ ಒಕ್ಕೂಟದ ಸದಸ್ಯರಿಗೆ ರಾತ್ರಿ 8ಕ್ಕೆ ಭೇಟಿಗೆ ಸಮಯ ನೀಡಿದ ರಾಷ್ಟ್ರಪತಿ
ಪ್ರಮುಖ ನಿಲ್ದಾಣಗಳಾದ ರಾಜೀವ್ ಚೌಕ್, ನವದೆಹಲಿ, ಸೆಂಟ್ರಲ್ ಸೆಕ್ರೆಟರಿಯಟ್, ಕಾಶ್ಮೀರಿ ಗೇಟ್, ಮಂಡಿ ಹೌಸ್ ಸೇರಿದಂತೆ 57 ನಿಲ್ದಾಣಗಳಲ್ಲಿ ನಿರ್ಬಂಧಗಳು ಇರಲಿವೆ. ಬಹುತೇಕ ನಿಲ್ದಾಣಗಳಲ್ಲಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಬದಲಾಯಿಸುವ ಇಂಟರ್ಚೇಂಜ್ ಸೌಲಭ್ಯ ಮುಂದುವರಿಯಲಿದೆ. ಆದರೆ, ನವದೆಹಲಿ ಮೆಟ್ರೋ ನಿಲ್ದಾಣದಲ್ಲಿ ಈ ಸೌಲಭ್ಯವೂ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ.ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೆಇಎ – PGCET ಚಾಯ್ಸ್ ದಾಖಲಿಸಲು ಅವಕಾಶ

