ತುಮಕೂರು: ಅಡುಗೆ ಎಣ್ಣೆ (Cooking Oil) ಮರುಬಳಕೆ ದಂಧೆಗೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಹೇಳಿದ್ದಾರೆ.
ಡಿಹೆಚ್‌ಓ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ದಂಧೆ ನಡೆಯುತ್ತಿದೆ. ಇದನ್ನು ಬ್ಯಾನ್ ಮಾಡುವ ಯೋಚನೆ ಇದೆ. ಎಣ್ಣೆಯನ್ನು ಎಲ್ಲಿ ಖರೀದಿಸುತ್ತಾರೋ ಅಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಆ್ಯಪ್‌ನಲ್ಲಿ ನಮೂದು ಮಾಡುವಂತೆ ಚಿಂತನೆ ನಡೆಸಲಾಗಿದೆ. ಬಳಕೆ ಮಾಡಿದ ನಂತರ ಉಳಿದ ಎಣ್ಣೆ ಪ್ರಮಾಣ ಎಷ್ಟು ಎಂದು ಇದರಿಂದ ಗೊತ್ತಾಗಲಿದೆ ಎಂದರು. ಇದನ್ನೂ ಓದಿ: ದೆಹಲಿ | ವಿಪಕ್ಷಗಳ ಪ್ರತಿಭಟನೆಯಲ್ಲಿ ಮೋದಿ ಪರ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ

ಜಿಲ್ಲೆಯಲ್ಲಿ ಆಸ್ಪತ್ರೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಔಷಧ ಹಾಗೂ ಉಪಕರಣಗಳ ಕೊರತೆ ಇದ್ದು, ಅದನ್ನು ಶೀಘ್ರದಲ್ಲೇ ನೀಗಿಸಲಾಗುವುದು. ವೈದ್ಯರು ಹಾಗೂ ಫಾರ್ಮಾಸಿಸ್ಟ್ ಕೊರತೆ ರಾಜ್ಯಾದ್ಯಂತ ಇದ್ದರೂ, ತುಮಕೂರು ಜಿಲ್ಲೆಯಲ್ಲಿ ಶೇ.100ರಷ್ಟು ವೈದ್ಯರು ಇದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಪ್ಪಳ| ಡೀಸೆಲ್ ಕೊರತೆ – ಡಿಪೋದಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್‌ಗಳು
ನಕಲಿ ವೈದ್ಯರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಅಥವಾ ರಾಜಕಾರಣಿಗಳು ನಕಲಿ ವೈದ್ಯರ ಹಿಂದೆ ಇದ್ದರೂ ಕ್ರಮ ನಿಶ್ಚಿತ. ಇನ್ನು 15 ದಿನದಲ್ಲಿ ಎಲ್ಲವನ್ನೂ ಕ್ಲೀನ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗುಡುಗಿದರು. ಇದನ್ನೂ ಓದಿ: ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್ – 56ನೇ ವಯಸ್ಸಿನಲ್ಲಿ ಏಕಾಏಕಿ ಧೂಮಪಾನ ಬಿಟ್ಟಿದ್ದೇಕೆ?
ಸಿಎಂ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರ ನನಗೆ ಗೊತ್ತಿಲ್ಲ. ನಾನು ಚೆನ್ನಾಗಿ ಕೆಲಸ ಮಾಡುವುದರಲ್ಲಿ ನಿರತನಾಗಿದ್ದೇನೆ. ಸಿಎಂ ಎಚ್ಚರಿಕೆ ಕೊಟ್ಟಿರುವ ಸಚಿವರು ಯಾರು ಎಂದು ನನಗೆ ಗೊತ್ತಿಲ್ಲ. ನಾನು ಮೊನ್ನೆ ಕ್ಯಾಬಿನೆಟ್ ಸಭೆಯಿಂದ ಬೇಗ ಹೋಗಿದ್ದೆ, ಅಲ್ಲಿ ನಡೆದ ಚರ್ಚೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು | ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ

