ಕಂದಾಯ ಗುಪ್ತಚರ ನಿರ್ದೇಶನಾಲಯದ ಮಾಹಿತಿ ಪ್ರಕಾರ, ಚೀನಾದಿಂದ ಪಟಾಕಿಗಳನ್ನು ಕಾನೂನುಬಹಿರವಾಗಿ ತರಲಾಗುತ್ತಿತ್ತು. ಪೆಟ್ಟಿಗೆಗಳ ಮೇಲೆ ಸ್ಟೇಷನರಿ ಸಾಮಗ್ರಿಗಳು, ಗ್ಲೌಸ್ಗಳು, ಪ್ಲಾಸ್ಟಿಕ್ ಕ್ಲಿಪ್ಗಳು, ಹೇರ್ ಬ್ಯಾಂಡ್ಗಳು, ಬಟ್ಟೆ ಇಡುವ ವಾರ್ಡ್ರೋಬ್ಗಳು, ಶೂ ರಾಕ್ಗಳು ಮತ್ತು ಇತರೆ ವಸ್ತುಗಳು ಎಂದು ಸುಳ್ಳು ಲೇಬಲ್ ಅಂಟಿಸಿ ಈ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಿಪಂ, ತಾಪಂ ಚುನಾವಣಾ ಮೀಸಲಾತಿ ಪ್ರಕಟ
ಈ ಮಾಹಿತಿ ಆಧರಿಸಿ ಡಿಆರ್ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಂಟೈನರ್ಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಬೇರೆ ವಸ್ತುಗಳಿದ್ದ ಪೆಟ್ಟಿಗೆಗಳ ಒಳಗೆ ಬಚ್ಚಿಟ್ಟಿದ್ದ ದೊಡ್ಡ ಪ್ರಮಾಣದ ಒಟ್ಟು 12 ಕೋಟಿ ರೂ. ಮೌಲ್ಯದ ಚೀನಾ ಮೂಲದ ಪೈರೋಟೆಕ್ನಿಕ್ ಪಟಾಕಿಗಳು ಪತ್ತೆಯಾಗಿವೆ.ಇದನ್ನೂ ಓದಿ: ಸಚಿವ ಖಂಡ್ರೆ ತವರಲ್ಲೇ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್ ಮೇಲೆ ಹಲ್ಲೆ – ವಿಡಿಯೋ ವೈರಲ್
ವಿದೇಶಿ ವ್ಯಾಪಾರ ನೀತಿಯಡಿ ಪಟಾಕಿಗಳ ಆಮದು ನಿರ್ಬಂಧಿಸಲಾಗಿದೆ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ಟಿ) ಹಾಗೂ 2008ರ ಸ್ಫೋಟಕ ನಿಯಮಗಳ ಅಡಿಯಲ್ಲಿ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ (ಪಿಇಎಸ್ಒ) ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಆದರೆ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ವಸ್ತುಗಳ ಹೆಸರನ್ನು ತಪ್ಪಾಗಿ ನಮೂದಿಸಿ ಈ ಪಟಾಕಿಗಳನ್ನು ತರಲಾಗಿತ್ತು. ಹೀಗಾಗಿ ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಈ ರೀತಿಯ ನಿಷೇಧಿತ ಮತ್ತು ನಿರ್ಬಂಧಿತ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಡಿಆರ್ಐ ನಿರಂತರವಾಗಿ ಇಂತಹ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಇದನ್ನೂ ಓದಿ; ಕಣ್ಣಿಗೆ ಕಾಣದ ಲೋಕಕ್ಕೆ ಭರವಸೆಯ ಬೆಳಕು; ಬಿಡಿಎ ಅಧ್ಯಕ್ಷ ಪೀಠದಲ್ಲಿ ಅಂಧ ಬಾಲಕ!

