ವಾಷಿಂಗ್ಟನ್: ಟ್ರಕ್ (Truck) ಡಿಕ್ಕಿಯಾಗಿ ತೆಲಂಗಾಣ (Telangana) ಮೂಲದ 31 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿರುವ ಘಟನೆ ಅಮೆರಿಕದ (America) ಮಿಸ್ಸೌರಿಯಲ್ಲಿ (Missouri) ನಡೆದಿದೆ.
ಮೃತರನ್ನು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮರಿಪೆಡಾ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಅವರು ಮಿಸ್ಸೌರಿಯ ಸೇಂಟ್ ಲೂಯಿಸ್ ಪ್ರದೇಶದ ರೆಸ್ಟೋರೆಂಟ್‌ವೊದರಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಹಬ್ಬದ ವೇಳೆ ಬೀದಿಬದಿ ವ್ಯಾಪಾರಿಗಳ ತೆರವುಗೊಳಿಸಬೇಡಿ: ರಾಜ್ಯಗಳಿಗೆ NHRC ಸೂಚನೆ
ಶನಿವಾರ ರಾತ್ರಿ ರೆಸ್ಟೋರೆಂಟ್ ಕೆಲಸ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಮತ್ತೊಬ್ಬ ಭಾರತೀಯ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; 12 ಮೆಟ್ರೋ ಸ್ಟೇಷನ್‌ಗಳಲ್ಲಿ ಪಾರ್ಕಿಂಗ್‌ಗೆ ಟೆಂಡರ್ ಆಹ್ವಾನ
ಸುಮಾರು ಐದು ವರ್ಷಗಳ ಹಿಂದೆ ಸುಪ್ರಿಯಾ ಅವರು ಸಾಫ್ಟ್ವೇರ್ ಉದ್ಯೋಗಿಯಾಗಿರುವ ಕೊಡಮುರಿ ರಂಜಿತ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಆದಿತ್ಯ ಎಂಬ ಎರಡೂವರೆ ವರ್ಷದ ಪುತ್ರನಿದ್ದಾನೆ. ಸುಪ್ರಿಯಾ ಸಾವಿನ ಸುದ್ದಿ ತಿಳಿದು ಭಾರತದಲ್ಲಿರುವ ಅವರ ತಂದೆ-ತಾಯಿ ಹಾಗೂ ಅತ್ತೆ-ಮಾವ ಆಘಾತಕ್ಕೊಳಗಾಗಿದ್ದಾರೆ. ಸುಪ್ರಿಯಾ ಅವರ ಮೃತದೇಹವನ್ನು ಭಾರತಕ್ಕೆ ತಂದು ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡುವಂತೆ ಅವರ ತಂದೆ ದಾರಂ ಶ್ರೀನಿವಾಸ್ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲ್ಲ- ನೈಸ್‌ಗೆ ಸುಪ್ರೀಂನಲ್ಲಿ ಹಿನ್ನಡೆ
ಈ ಘಟನೆ ಬಗ್ಗೆ ತಿಳಿದು ನಾವು ಆಘಾತಕ್ಕೊಳಗಾಗಿದ್ದೇವೆ. ಮಾತನಾಡಲು ಕೂಡ ಪದಗಳಿಲ್ಲ. ನನ್ನ ಮಗಳ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಭಾರತಕ್ಕೆ ತರಲು ತೆಲಂಗಾಣ ರಾಜ್ಯ ಸರ್ಕಾರ ಸಹಾಯ ಮಾಡಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ. ಸುಪ್ರಿಯಾ ಅವರ ಕುಟುಂಬವು ಅವರ ಪುತ್ರನ ಶಿಕ್ಷಣ, ಆರೋಗ್ಯ ಹಾಗೂ ದೈನಂದಿನ ಅಗತ್ಯಗಳಿಗೆ ನೆರವಾಗಲು `ಗೋ ಫಂಡ್ ಮೀ’ ಮೂಲಕ ದೇಣಿಗೆ ಸಂಗ್ರಹ ಆರಂಭಿಸಿದೆ. ತಾಯಿಯನ್ನು ಕಳೆದುಕೊಂಡಿರುವ ಎರಡೂವರೆ ವರ್ಷದ ಮಗುವಿಗೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ನೆರವು ಒದಗಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರ 46 ಸಾವಿರ ಕೋಟಿ ನಷ್ಟ, ಈ ವರ್ಷ ಜಿಎಸ್‌ಟಿ ಸಂಗ್ರಹ ಕುಸಿತ: ಜಿ. ಪರಮೇಶ್ವರ್

