ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. 12 ಮೆಟ್ರೋ ಸ್ಟೇಷನ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ (BMRCL) ಟೆಂಡರ್ ಕರೆದಿದೆ.
ಮೆಟ್ರೋ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಆಡಲು ಬಿಎಂಆರ್‌ಸಿಎಲ್ ಮುಂದಾಗಿದೆ. 12 ಮೆಟ್ರೋ ಸ್ಟೇಷನ್‌ಗಳಲ್ಲಿ (Metro Parking Stations) ಶೀಘ್ರದಲ್ಲೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರುಗಳಿಗೆ ಬೆಲೆ ನಿಗದಿ ಮಾಡಿ ಪಾರ್ಕಿಂಗ್‌ಗೆ ಟೆಂಡರ್ ಆಹ್ವಾನ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರೇ ಗಮನಿಸಿ – ಇಂದಿನಿಂದ 60 ದಿನ ರೇಸ್ ಕೋರ್ಸ್ ರಸ್ತೆ ಬಂದ್
ದ್ವಿಚಕ್ರ ವಾಹನಗಳಿಗೆ ಮೊದಲ 4 ಗಂಟೆಗೆ 15 ರೂ. ನಂತರ ಪ್ರತಿ ಗಂಟೆಗೆ 5 ರೂಪಾಯಿ ಶುಲ್ಕ ಇರಲಿದೆ. ಒಂದು ದಿನಕ್ಕೆ 30 ರೂಪಾಯಿ ವಿಧಿಸಲಿದೆ. ಕಾರು, ಜೀಪ್ ಮೊದಲ 4 ಗಂಟೆಗೆ 30 ರೂಪಾಯಿ. ನಂತರ ಪ್ರತಿ ಗಂಟೆಗೆ 10 ರೂಪಾಯಿ ಶುಲ್ಕ. ಒಂದು ದಿನಕ್ಕೆ 60 ರೂಪಾಯಿ ಪಾರ್ಕಿಂಗ್ ಚಾರ್ಜ್ ವಿಧಿಸಲಿದೆ. ಸೈಕಲ್‌ಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಮೆಟ್ರೋ ಸ್ಟೇಷನ್‌ಗಳು ಯಾವ್ಯಾವು?
1.ನಲ್ಲೂರುಹಳ್ಳಿ ಮೆಟ್ರೋ ಸ್ಟೇಷನ್
82 ಬೈಕ್ ಸಾಮರ್ಥ್ಯ
2.ಬಾಲಗಂಗಾಧರನಾಥ ಸ್ವಾಮೀಜಿ ಹೊಸಹಳ್ಳಿ
186 ಬೈಕ್ ಸಾಮರ್ಥ್ಯ
3.ಪಟ್ಟಣಗೆರೆ ಮೆಟ್ರೋ ಸ್ಟೇಷನ್
156 ಬೈಕ್‌ಗಳ ನಿಲುಗಡೆ
4.ಮಾದಾವರ
328 ಬೈಕ್
5.ಚಿಕ್ಕಬಿದರಕಲ್ಲು
355 ಬೈಕ್
6.ಮಂತ್ರಿ ಸ್ಕ್ವೇರ್ ಮೆಟ್ರೋ ಸ್ಟೇಷನ್
450 ಬೈಕ್ + 87 ಕಾರು
7.ರಾಗಿಗುಡ್ಡ ಮೆಟ್ರೋ ಸ್ಟೇಷನ್
230 ಬೈಕ್
8.BTM ಲೇಔಟ್
216 ಬೈಕ್
9.ತಾವರೆಕೆರೆ
155 ಬೈಕ್
10.IIM-B ಮೆಟ್ರೋ ಸ್ಟೇಷನ್
55 ಬೈಕ್
11.ಹುಳಿಮಾವು
155 ಬೈಕ್
12.ಕಾಳೇನ ಅಗ್ರಹಾರ
110 ಬೈಕ್

