ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ರೇಸ್ ಕೋರ್ಸ್(RaceCource) ರಸ್ತೆಯಲ್ಲಿ ವೈಟ್ ಟಾಪಿಂಗ್(White Tapping) ಕಾಮಗಾರಿ ಆರಂಭವಾಗುತ್ತಿದ್ದು, ಇಂದಿನಿಂದ ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಶಿವಾನಂದ ಜಂಕ್ಷನ್ ಕಡೆಯಿಂದ ಮೌರ್ಯ ಸರ್ಕಲ್ ಕಡೆಗೆ ಸಾಗುವ ರೇಸ್ ಕೋರ್ಸ್ ರಸ್ತೆ. ರೇಸ್ ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್ನಿಂದ (Trilight Junction) ಮೌರ್ಯ ಜಂಕ್ಷನ್ವರೆಗಿನ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ ಹೇರಲಾಗಿದೆ. ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು(Bengaluru Traffic Police) ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.
ಪರ್ಯಾಯ ಮಾರ್ಗಗಳು:
1. ಸ್ಯಾಂಕಿ ರಸ್ತೆಯಿಂದ ಕೆ.ಆರ್. ಮಾರುಕಟ್ಟೆ ಕಡೆಗೆ ತೆರಳುವ ಬಿಎಂಟಿಸಿ, ಖಾಸಗಿ ಹಾಗೂ ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್ ಜಂಕ್ಷನ್ನಿಂದ ನೇರವಾಗಿ ಎಲ್ಆರ್ಡಿಇ (LRDE) ಜಂಕ್ಷನ್ಗೆ ತೆರಳಿ ಅಲ್ಲಿ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್ (ಚಾಲುಕ್ಯ ಸರ್ಕಲ್) ಮೂಲಕ ಮುಂದಕ್ಕೆ ಸಾಗುವುದು. ಇದನ್ನೂ ಓದಿ: ಬೆಂಗಳೂರಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು
2. ಸ್ಯಾಂಕಿ ರಸ್ತೆಯಿಂದ ಮೆಜೆಸ್ಟಿಕ್/ಕೆಂಪೇಗೌಡ ಬಸ್ ನಿಲ್ದಾಣ ಕಡೆಗೆ ತೆರಳುವ ವಾಹನಗಳು ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಸರ್ಕಲ್ ತಲುಪುವುದು. ನಂತರ ಬಲ ತಿರುವು ಪಡೆದು, ಎಸ್.ಸಿ. ರಸ್ತೆಯಲ್ಲಿ ಎಡತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ತೆರಳುವುದು.
3 ಓಲ್ಡ್ ಜೆಡಿಎಸ್ (Old JDS) ಜಂಕ್ಷನ್ನಿಂದ ತ್ರಿಲೈಟ್ ಜಂಕ್ಷನ್ ಕಡೆಗೆ ತೆರಳುವವರು ಓಲ್ಡ್ ಜೆಡಿಎಸ್ನಲ್ಲಿ ಎಡಭಾಗದ ರಸ್ತೆಯ ಮೂಲಕ ಟ್ರಿಲೈಟ್ ಕಡೆಗೆ ತೆರಳಿ ರೇಸ್ವ್ಯೂ ಜಂಕ್ಷನ್ನಲ್ಲಿ ಎಡತಿರುವು ಪಡೆದು, ಕುಮಾರಕೃಪ ರಸ್ತೆ ಮೂಲಕ ಶಿವಾನಂದ ಜಂಕ್ಷನ್ ತಲುಪುವುದು.
4.ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವವರು ಟ್ರಿಲೈಟ್ ಜಂಕ್ಷನ್ನಿಂದ ಶಿವಾನಂದ ಫ್ಲೈಓವರ್ ಮೇಲೆ ನೇರವಾಗಿ ಚಲಿಸಿ, ನೆಹರು ಸರ್ಕಲ್ ತಲುಪಿ, ಅಲ್ಲಿಂದ ಎಸ್.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಅಥವಾ ಮುಂದಿನ ಮಾರ್ಗಕ್ಕೆ ಸಾಗುವುದು.

